ಗುಬ್ಬಿಸತ್ಯ ವಿಸ್ಮಯ ಪತ್ರಿಕೆ

ಗುಬ್ಬಿ ರಾಯವಾರ ರಸ್ತೆಗೆ ಪುನೀತ್ ರಾಜಕುಮಾರ್ ಹೆಸರಿಡಲು ಪುನೀತ್ ಅಭಿಮಾನಿ ಬಳಗ ಆಗ್ರಹ.

ಗುಬ್ಬಿ: ಅಕಾಲಿಕ ಮೃತ್ಯುವಿಗೆ ತುತ್ತಾದ ನಟ ಪುನೀತ್ ರಾಜಕುಮಾರ್ ಅವರ ಹೆಸರು ಪಟ್ಟಣದ ಪ್ರಮುಖ ರಸ್ತೆ ಬಸ್ ನಿಲ್ದಾಣದಿಂದ ಎಪಿಎಂಸಿ ಮುಂಭಾಗ ಹಾದು ಮಹಾಲಕ್ಷ್ಮೀ ನಗರ ಬಡಾವಣೆ ಸಂಪರ್ಕಿಸುವ ರಸ್ತೆಗೆ ನಾಮಕರಣ ಮಾಡುವ ಮೂಲಕ ಗುಬ್ಬಿ ನಾಗರೀಕರು ಶ್ರದ್ದಾಂಜಲಿ ಅರ್ಪಿಸಲು ಅನುವು ಮಾಡುವಂತೆ ಪಟ್ಟಣ ಪಂಚಾಯಿತಿಗೆ ಪುನೀತ್ ಅಭಿಮಾನಿಗಳ ಬಳಗವು ಮನವಿ ಸಲ್ಲಿಸಿತು.

ಮೇರು ನಟ ಡಾ.ರಾಜಕುಮಾರ್ ಅವರ ಹೆಸರಿಗೆ ತಕ್ಕಂತೆ ಸಿನಿಮಾ ರಂಗದಲ್ಲಿ ರಾಜಕುಮಾರನಾಗಿ 46 ವರ್ಷ ಇತಿಹಾಸ ಮಾಡಿದ ಕನ್ನಡ ನಾಡಿನ ಅಪ್ಪು ಅವರ ಸಾವು ಇಡೀ ನಾಡಿಗೆ ತಂದ ಸೂತಕವಾಗಿದೆ. ಅವರ ಸಾಮಾಜಿಕ ಕಳಕಳಿ ಇಂದಿಗೂ ಪ್ರಸ್ತುತ. ಅವರ ನಿಧನಕ್ಕೆ ರಾಜ್ಯವೇ ಕಂಬನಿ ಮಿಡಿದಿದೆ. ಈ ಸಂದರ್ಭದಲ್ಲಿ ಗುಬ್ಬಿ ನಾಗರೀಕರ ಪರ ಶ್ರದ್ದಾಂಜಲಿ ಅರ್ಪಿಸಲು ಪ್ರಮುಖ ರಸ್ತೆ ಬಸ್ ನಿಲ್ದಾಣದಿಂದ ಎಪಿಎಂಸಿ ಮಹಾಲಕ್ಷ್ಮೀ ನಗರ ಬಡಾವಣೆ ಮೂಲಕ ರೈಲ್ವೇ ಹಳಿ ತಲುಪುವ ಸುಮಾರು ಒಂದು ಕಿಮೀ ರಾಯವಾರ ರಸ್ತೆಗೆ ಪುನೀತ್ ರಾಜಕುಮಾರ್ ಹೆಸರು ಇಡಬೇಕು ಎಂದು ಅಗ್ರಹಿಸಲಾಗಿದೆ ಎಂದು ಬಳಗ ತಿಳಿಸಿದೆ.

ಮನವಿ ಸ್ವೀಕರಿಸಿದ ಪಪಂ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ಮತ್ತು ಮುಖ್ಯಾಧಿಕಾರಿ ಯೋಗೀಶ್ ಈ ಮನವಿಯನ್ನು ಮುಂದಿನ ಸಾಮಾನ್ಯ ಸಭೆಯಲ್ಲಿ ಮಂಡಿಸಿ ನಿಯಮಾನುಸಾರ ರಸ್ತೆಗೆ ನಾಮಕರಣ ಮಾಡುವ ಭರವಸೆ ನೀಡಿದರು.

ಪಪಂ ಸದಸ್ಯರಾದ ಜಿ.ಆರ್.ಶಿವಕುಮಾರ್, ಶೋಕತ್ ಆಲಿ, ಅಭಿಮಾನಿ ಬಳಗದ ಉದ್ಯಮಿ ಮಧುಗೌಡ, ಮಂಜುನಾಥ್, ಜಯ ಕರ್ನಾಟಕ ಉಪಾಧ್ಯಕ್ಷ ಮಧು, ನಾಗಸಂದ್ರ ವಿಜಯಕುಮಾರ್, ಮಹಮದ್ ಗೌಸ್, ಡಿ.ರಘು, ನಿತಿನ್, ಕಿರಣ, ಪುಟ್ಟರಾಜು, ಅಮಿತ್, ಬ್ಯಾಟರಾಯಪ್ಪ , ರಮೇಶ್ ಇತರರು ಇದ್ದರು.

ವರದಿ :- ರಾಘವೇಂದ್ರ ಗುಬ್ಬಿ

Related Articles

Leave a Reply

Your email address will not be published.

Back to top button

protected