Techತುಮಕೂರುಪಾವಗಡವಿಜಯನಗರಸತ್ಯ ವಿಸ್ಮಯ

ಕೆ.ಟಿ.ಹಳ್ಳಿಯಲ್ಲಿ ಬೀದಿನಾಟಕದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ

ಪಾವಗಡ : ಪಾವಗಡ ತಾಲೂಕಿನ ಕೆ.ಟಿ. ಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ನೀರಿನ ನೈರ್ಮಲ್ಯ ಹಾಗೂ ಬಾಲ್ಯ ವಿವಾಹದ ಬಗ್ಗೆ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಬೀದಿ ನಾಟಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


ಈ ಬೀದಿ ನಾಟಕ ಕಾರ್ಯಕ್ರಮದ ಮೂಲಕ ಜನಸಮಾನ್ಯರಿಗೆ ಅರಿವು ಮೂಡಿಸುವ ಸಲುವಾಗಿ ಇಂತಹ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಇದನ್ನ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಯೋಜನಾಧಿಕಾರಿ ನಂಜುಂಡಿ ತಿಳಿಸಿದರು. ಕರಿಯಮ್ಮನಪಾಳ್ಯ ರಾಜ್ ಗೋಪಾಲ್ ರ ವಾಲ್ಮೀಕಿ ಗ್ರಾಮೀಣ ರಂಗ ಸುಗ್ಗಿ ಕಲಾ ತಂಡದಿಂದ ಮರಿಸ್ವಾಮಿ, ಪಾಲಯ್ಯ,ಹನುಮಂತರಾಯಪ್ಪ, ಪಾವಗಡ ಪ್ರಭಾ ಕಲಾವಿದರೊಳಗೊಂಡ ಜನರಲ್ಲಿ ಅರಿವು ಮೂಡಿಸುವ ಬೀದಿನಾಟಕ ನೋಡುಗರನ್ನ ಗಮನಸೆಳೆಯಿತು. ಈ ಕಾರ್ಯಕ್ರಮದಲ್ಲಿ ಬ್ಯಾಂಕ್ ಮೆನೇಜರ್ ಚಾಮುಂಡೇಶ್ವರಿ , ಕೆ.ಟಿ ಹಳ್ಳಿ ನಿವೃತ್ತ ಯೋಧ ಅನಂತ ಕುಮಾರ್, ವಲಯ ಮೇಲ್ವಿಚಾರಕರು ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಉಷಾರಾಣಿ, ಕೇಂದ್ರದ ಅಧ್ಯಕ್ಷರು ಒಕ್ಕೂಟದ ಅಧ್ಯಕ್ಷರು ಹಾಗೂ ಸೇವಾ ಪ್ರತಿನಿಧಿ ಚಂದ್ರಕಲಾ , ಮಂಜುನಾಥ್ ಸೇರಿದಂತೆ ಹಲವರು ಇದ್ದರು.

ವರದಿ: ನವೀನ್ ಕಿಲಾರ್ಲಹಳ್ಳಿ

Related Articles

Leave a Reply

Your email address will not be published.

Back to top button

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5275

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5275

Notice: ob_end_flush(): failed to send buffer of zlib output compression (1) in /home2/sathyavi/public_html/wp-content/plugins/really-simple-ssl/class-mixed-content-fixer.php on line 110