ಚಿತ್ರದುರ್ಗ:- ಮಹಾ ಮಂತ್ರಿಗಳ ಮಾಹಾ ರಾಮಾಯಣ.

ಮಂತ್ರಗಳ ಜೀರೋ ಟ್ರಾಫಿಕ್ ನಲ್ಲಿ ಜಬರ್ದಸ್ತ್ ಓಡಾಟ, ಸಾರ್ವಜನಿಕರಿಗೆ ಪರದಾಟ.
ಚಿತ್ರದುರ್ಗ ಜಿಲ್ಲೆ :-ಮಂತ್ರಿಗಳೇ ಇದು ನ್ಯಾಯಾನಾ…!?? ನೀವು ಬಂದರೆ ನೀವು ಬಂದು ಹೋಗುವವರೆಗೂ ಕಾಯಲು ಇದು ಬ್ರಿಟಿಷ್ ಸರ್ಕಾರವೇ..? ಅಥವಾ ನಾವು ನಿಮ್ಮ ಗುಲಾಮರೆ..? ಎಂತಹ ಅನ್ಯಾಯ ಅಲ್ವೆ..? ಅದೇಷ್ಟೋ ಜನ ಸವಾರರು, ದಾರಿ ಹೋಕರು, ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಯಾರ್ಯಾರು ತಮ್ಮ ಯಾವ ಯಾವ ಕಷ್ಟಗಳಿಗಾಗಿ ಪ್ರವಾಸ ಬೆಳೆಸಿರುತ್ತರೋ ಅಂತ ಕಿಂಚೊತ್ತಾದರೂ ಯೋಚನೆ ಮಾಡಿದ್ದಿರಾ ಮಹಾಸ್ವಾಮಿ..? ಛೇ…. ಎಂತಹ ದುರ್ಗತಿ ಬಂತು ನಮಗೆಲ್ಲಾ..!!

ನಿಮಗೋಸ್ಕರ ಕಾಯುವಂತಹ ತಪ್ಪಾದರೂ ನಾವು ಏನು ಮಾಡಿದಿವಿ ಸ್ವಾಮಿ..? ನೀವು ನಮಗೆ ದುಡಿದು ಹಾಕಲ್ಲ, ಹಸಿವಿದ್ದರೆ ಅನ್ನ ಹಾಕಲ್ಲ, ಶಾಲೆ ಫೀಜು ಕಟ್ಟಲ್ಲ, ಮನೆಗೆ ಬಂದು ನಮ್ಮ ಕಷ್ಟ ಸುಖ ವಿಚಾರಿಸಲ್ಲ, ನಮ್ಮ ಆರೋಗ್ಯ ಹದಗೆಟ್ಟರೆ ಉತ್ತಮ ಚಿಕಿತ್ಸೆ ಕೊಡಿಸಲ್ಲ, ನಮ್ಮೂರ ರಸ್ತೆಗಳು, ಕೇರಿಗಳು, ಶಾಲೆಗಳು ಹದಗೆಟ್ಟರೆ ಬಂದು ಬಗ್ಗಿ ನೋಡಲ್ಲ. ಆದರೆ ನಾವು ಮಾತ್ರ ನೀವು ಹೊರಟ ದಾರಿಯಲ್ಲಿ ನಾವುಗಳು ಹೋಗುವವರೆಗೂ ಗುಲಾಮರಂತೆ ಕಾಯಬೇಕು…! ಯಾಕೆ ಕಾಯಬೇಕು..? ಯಾವ ಪುರುಷಾರ್ಥಕ್ಕೆ ಕಾಯಬೇಕು…?

ಪ್ರಯಾಣಿಕರಲ್ಲಿ ಯಾರೋ ಮನೆಯಲ್ಲಿ ಹಾಲು ಕುಡಿಯುವ ಹಸಿಗೂಸನ್ನು ಬಿಟ್ಟು ಬಂದಿರಬಹುದು, ವೃದ್ಧ ತಂದೆ ತಾಯಿಯರಿಗೆ ಔಷಧಿ ಕೊಂಡೊಯ್ಯುತ್ತಿರಬಹುದು, ಯಾರೋ ಶವ ಸಂಸ್ಕಾರಕ್ಕೆ ಹೋಗುತ್ತಿರಬಹುದು, ಯಾರೋ ಆಸ್ಪತ್ರೆಗೆ ಹೋಗುತ್ತಿರಬಹುದು, ಇನ್ಯಾರೋ ವಯಸ್ಸಾಗಿರುವ ತಮ್ಮ ತಂದೆ ತಾಯಿಯರನ್ನ ಕತ್ತಲಾಗುವುದರೊಳಗೆ ಮನೆಗೆ ಕರೆ ತರಲು ಹೊರಟೊರಬಹುದು..! ನಿಮಗೆ ಇಂತಹ ಯಾವ ಕಷ್ಟಗಳೂ ಇರಲಿಕ್ಕಿಲ್ಲ ಅಂದ್ಕೊಳ್ತಿವಿ ಸ್ವಾಮಿ..! ಯಾಕಂದ್ರೆ ತಮಗೆಲ್ಲಾ ಪ್ರತಿಯೊಂದಕ್ಕೂ ಒಬ್ಬೊಬ್ಬ ಆಳು. ಆದರೆ ನಮಗೆ ಆಳುಗಳನ್ನು ಇಟ್ಟುಕೊಳ್ಳುವ ಶಕ್ತಿ ಇಲ್ಲ ಸ್ವಾಮಿ. ನಿಮ್ಮಿಂದ ನಾವು ಏನೂ ಬಯಸಿಲ್ಲ ಬಯಸುವುದೂ ಇಲ್ಲ. ಸಾಕು, ನಾವು ಹೋಗುವ ನಮ್ಮ ದಾರಿ ನಮಗೆ ಬಿಟ್ಟು ಬಿಡಿ…! ಹೀಗೆಲ್ಲಾ ಇಂದು ಸಂಜೆ 6 ಗಂಟೆಯ ವೇಳೆಯಲ್ಲಿ ಚಿತ್ರದುರ್ಗದಿಂದ ಬೆಂಗಳೂರಿಗೆ ಹೊರಟ ಬೈಪಾಸಿನಲ್ಲಿ ಮಂತ್ರಿಗಳು ಹೋಗಲಿಕ್ಕೆ ವಾಹನಗಳನ್ನೆಲ್ಲಾ ಪೋಲಿಸರು ನಿಲ್ಲಿಸಿದಾಗ ಬಸ್ಸಿನ ಪ್ರಯಾಣಿಕರೊಬ್ಬರು ತೋಡಿಕೊಂಡ ಅಳಲು.
ವರದಿ:- ಅನಿಲ್ಕುಮಾರ್ ಶಾಸ್ತ್ರಿ
Super news sir.
ಎಲ್ಲಾ ರೀತಿಯಿಂದಲೂ ಉತ್ತಮವಾಗಿ ಮೂಡಿ ಬರುತ್ತಿದೆ.
ಆ ದೇವರು ಒಳ್ಳೆಯದನ್ನೇ ಮಾಡಲಿ.