ರಾಯಚೂರುಸತ್ಯ ವಿಸ್ಮಯ

*ಸಿಂಧನೂರು ತಾಲೂಕಿನಲ್ಲಿ ಸೇತುವೆ ಸೇರಿ ವಿವಿಧ ಹಳ್ಳಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಮತ್ತು ಸಂಸದರಿಂದ ಗುದ್ದಲಿ ಪೂಜೆ,

  • ಸಿಂಧನೂರು:-ನಗರದಲ್ಲಿ ಇಂದು ಕೇಂದ್ರ ಸರ್ಕಾರದ ಅನುದಾನದ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ 150.ಎ ಮೇಲಿರುವ ಸಿಂಧನೂರು ನಗರದ ದೊಡ್ಡ 400ಮೀಟರ್ ಉದ್ದದ.21.73ಕೋ ರೂಪಾಯಿಗಳ ವೆಚ್ಚದಲ್ಲಿ ಸೇತುವೆಯ ಅಗಲೀಕರಣ ಕಾಮಗಾರಿಗೆ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀ ವೆಂಕಟರಾವ್ ನಾಡಗೌಡ ಮತ್ತು ಕೊಪ್ಪಳ ಸಂಸದರಾದ ಶ್ರೀ ಕರಡಿ ಸಂಗಣ್ಣ ಭೂಮಿ ಪೂಜೆ ನೆರವೇರಿಸಿದರು ನಂತರ ತಾಲೂಕಿನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಾಮಗಾರಿಗಳಿಗೆ ವಿವಿಧ ಗ್ರಾಮಗಳಲ್ಲಿ ಬಂಗಾಲಿಕ್ಯಾಂಪ್ ಆರ್ ಎಚ್ ನಂ 4 ರಲ್ಲಿ ಪಿ ಎಮ್ ಜಿ ಎಸ್ ವೈ ಇಲಾಖೆಯ ಯೋಜನೆ ಅಡಿಯಲ್ಲಿ 394.84ಲಕ್ಷ ರೂಪಾಯಿಗಳ ವೆಚ್ಚದಲ್ಲಿ ರಸ್ತೆ ಡಾಂಬರೀಕರ ಮತ್ತು ರೌಡಕುಂದಿ -ಮಾವಿನಮಡಗು ನಲ್ಲಿ ಪಿ ಎಮ್ ಜಿ ಎಸ್ ವೈ 370.ಲಕ್ಷ ರೂಪಾಯಿಗಳ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಗೋರೆಬಾಳದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ 163.00ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ನಿಮಾ೯ಣ ಬಸಾಪುರ ಕೆ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ 100.00ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ನಿಮಾ೯ಣ ಜಾಲಿಹಾಳ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ 60ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ನಿಮಾ೯ಣ ಗೊರೇಬಾಳ ಕ್ಯಾಂಪಿನಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ 214.00ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ನಿಮಾ೯ಣ ಹೊಸಳ್ಳಿ ಇ ಜೆ ಮತ್ತು ಹೊಸಳ್ಳಿ ಕ್ಯಾಂಪ್ ನಲ್ಲಿ ಕುಡಿಯುವ ನೀರಿನ ಕೆರೆ ನಿಮಾ೯ಣ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಶ್ರೀ ಕೆ ವಿರೂಪಾಕ್ಷಪ್ಪ ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ ಮಸ್ಕಿ ಜೆ ಡಿ ಎಸ್ ಮುಖಂಡರು ಪಕ್ಷದ ಕಾಯ೯ಕತ೯ರು ತಾಲೂಕಿನ ಸಾವ೯ಜನಿಕರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವರದಿ :ಮಂಜುಸ್ವಾಮಿ.ಎಂ.ಎನ್
ರಾಜ್ಯ ವಿಶೇಷ ವರದಿಗಾರರು.
ಸತ್ಯ ವಿಸ್ಮಯ ಪತ್ರಿಕೆ

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5279

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5279

Notice: ob_end_flush(): failed to send buffer of zlib output compression (1) in /home2/sathyavi/public_html/wp-content/plugins/really-simple-ssl/class-mixed-content-fixer.php on line 107