ತುಮಕೂರುಸತ್ಯ ವಿಸ್ಮಯ ಪತ್ರಿಕೆ

ಜಿಲ್ಲಾ ಮಟ್ಟದ ಕಲೋತ್ಸವ: ಅಭಿನಯ ಗೀತೆಯಲ್ಲಿ ವಿಶೃಂಕ ಗೆ ದ್ವಿತೀಯ ಸ್ಥಾನ

ತುರುವೇಕೆರೆ: ತುಮಕೂರು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ 2023-23ರಲ್ಲಿ ನಡೆದ ಅಭಿನಯ ಗೀತೆ ಸ್ಪರ್ಧೆಯಲ್ಲಿ ತುರುವೇಕೆರೆಯ ಗ್ಲೋಬಲ್ ಎಂಬಸ್ಸಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ವಿಶೃಂಕ ದೇವರಮನೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ತುಮಕೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ‌ ಸಂಯುಕ್ತಾಶ್ರಯದಲ್ಲಿ‌ ತುಮಕೂರಿನ ಸಿದ್ದಗಂಗಾ ಪ್ರೌಢಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ನಡೆಯಿತು.ಅಭಿನಯ ಗೀತೆ ಸ್ಪರ್ಧೆಯಲ್ಲಿ ಪಾಲ್ಗೊಂಡು ದ್ವಿತೀಯ ಸ್ಥಾನ ಪಡೆದು ತುರುವೇಕೆರೆ ತಾಲ್ಲೂಕಿಗೆ ಹಾಗೂ ಗ್ಲೋಬಲ್‌ ಎಂಬಸ್ಸಿ ಶಾಲೆಗೆ ಕೀರ್ತಿ ತಂದ ವಿಶೃಂಕ ದೇವರಮನೆ ಅವರನ್ನು ಶಾಲಾ‌ ಆಡಳಿತ ಮಂಡಳಿ, ಶಿಕ್ಷಕ ವೃಂದ ಅಭಿನಂದಿಸಿದೆ.

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5279

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5279

Notice: ob_end_flush(): failed to send buffer of zlib output compression (1) in /home2/sathyavi/public_html/wp-content/plugins/really-simple-ssl/class-mixed-content-fixer.php on line 107