ತುಮಕೂರುಸತ್ಯ ವಿಸ್ಮಯ ಪತ್ರಿಕೆ

ಮಧುಗಿರಿ:ಯುದ್ಧಕ್ಕೆ ಇಳಿದ ಮೇಲೆ ಹಿಂಜರಿಯುವಪ್ರಶ್ನೆಯೇ ಇಲ್ಲಾ : ಶಾಸಕ ಎಂ.ವಿ. ವೀರಭದ್ರಯ್ಯ

ಮಧುಗಿರಿ:ಕಾರ್ಯಕರ್ತರ ಒತ್ತಾಯ ಹಾಗೂ ಹೈಕಮಾಂಡ್ ಸೂಚನೆ ಮೇರೆಗೆ ನಾನೇ ಮುಂದಿನ 2023ರ ವಿಧಾನಸಭಾ ಚುನಾವಣೆಗೆ ನಾನೇ ಸ್ಪರ್ಧೆ ಮಾಡುತ್ತೇನೆ: ಶಾಸಕ ಎಂ.ವಿ. ವೀರಭದ್ರಯ್ಯಮಧುಗಿರಿ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶಾಸಕರು ಮುಂದಿನ 2023ರ ವಿಧಾನಸಭಾ ಚುನಾವಣೆಯ ಜೆಡಿಎಸ್ ಪಕ್ಷದಲ್ಲಿ ಇತ್ತೀಚಿನ ದಿನಗಳಲ್ಲಿ ತುಂಬಾ ಗೊಂದಲ ಉಂಟಾಗಿತ್ತು ಏಕೆಂದರೆ ಹಾಲಿ ವಿಧಾನಸಭಾ ಕ್ಷೇತ್ರದ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಯಾರು ಬೇಕಾದರೂ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಬಹುದೆಂದು ಹೇಳಿದಗ. ಏಕೆ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ಹಲವಾರು ಕಾರ್ಯಕರ್ತರು ನನ್ನ ಅಭಿಮಾನಿಗಳು ಸೇರಿ ನನನ್ನು ವಿಚಾರಣೆ ಮಾಡಿದಾಗಲೂ ಸಹಾ ನಾನಗೆ ವೈಯಕ್ತಿಕ ತೊಂದರೆ ಆರೋಗ್ಯದಲ್ಲಿ ಏರುಪೇರು ಇರುವ ಕಾರಣದಿಂದ ನನ್ನ ಮಗ ಹಾಗೂ ನನ್ನ ಕುಟುಂಬದವರು ಈ ಬಾರಿ ನೀನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಬೇಡ.

ಒಳ್ಳೆ ಅಭ್ಯರ್ಥಿ ನೋಡಿ ಕ್ಷೇತ್ರವನ್ನು ಬಿಟ್ಟುಕೊಟ್ಟು ನಾವು ಹಗಲಿರುಳು ಶ್ರಮಿಸಿ ಗೆಲ್ಲಿಸೋಣ ಎಂದು ಹೇಳಿದ ಕಾರಣದಿಂದ ಮುಂಚಿತವಾಗಿ ಹೈಕಮಾಂಡ್ಗೆ ತಿಳಿದು ಬೇರೆ ಯಾರಾದರೂ ಅಭ್ಯರ್ಥಿಯನ್ನು ಆಯ್ಕೆ ಮಾಡಲಿ ಎಂಬುವ ದೃಷ್ಟಿಯಿಂದ ಮಾತನ್ನು ಹೇಳಬೇಕಾಯಿತು ಎಂದರು.ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ ತಕ್ಷಣ ನನ್ನ ಹಿತೈಷಿಗಳು ಪಕ್ಷದ ಕಾರ್ಯಕರ್ತರು ಸಾವಿರಾರು ಜನ ಸೇರಿ ಹೆಚ್ .ಡಿ .ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿಗಳಾದ ಹೆಚ್ .ಡಿ .ದೇವೇಗೌಡರ ನಿವಾಸದ ಹತ್ತಿರ ಹೋಗಿ ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷದಿಂದ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಬಾರದು ಎಂವಿ ವೀರಭದ್ರಯ್ಯ ರವರನ್ನೇ ಮಧುಗಿರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಬೇಕು ಬೇರೆಯವರು ಯಾರೇ ಬಂದರೂ ಕೂಡ ನಾವು ಕೆಲಸ ಮಾಡುವುದಿಲ್ಲ.

ಈಗಿರುವ ಶಾಸಕರು ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಶ್ರಮಿಸುತ್ತಿದ್ದಾರೆ ಆದ್ದರಿಂದ ಅವರನ್ನೇ ಮಧುಗಿರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನಾಗಿ ನಿಲ್ಲಲು ತಾವುಗಳು ಅನುಕೂಲ ಮಾಡಿಕೊಡಬೇಕೆಂದು ಬೃಹ ತಸಂಖ್ಯೆಯಲ್ಲಿ ಕಾರ್ಯಕರ್ತರು ಒತ್ತಾಯ ಮಾಡಿದ್ದರಿಂದ ಕಾರ್ಯಕರ್ತರ ಆಶಯದಂತೆ ನನ್ನನ್ನು ಮಾಜಿ ಪ್ರಧಾನಿಗಳಾದ ಎಚ್. ಡಿ .ದೇವೇಗೌಡ ರವರು ಹಾಗೂ ಹೆಚ್. ಡಿ .ಕುಮಾರಸ್ವಾಮಿ ರವರು ನನಗೆ ಆದೇಶ ಮಾಡಿದ್ದರಿಂದ ಇಂದು ನಾನು ಪತ್ರಿಕಾಗೋಷ್ಠಿಯನ್ನು ಕರೆದಿದ್ದೇನೆ.ಇಷ್ಟು ದಿನ ಜೆಡಿಎಸ್ ಪಕ್ಷದಲ್ಲಿ ಗೊಂದಲವಿತ್ತು ಆ ಗೊಂದಲಕ್ಕೆ ಇಂದು ತೆರೆ ಎಳೆಯಲಾಗಿದೆ. ಜೆಡಿಎಸ್ ಪಕ್ಷದಿಂದ ಮುಂಬರುವ ವಿಧಾನಸಭಾ ಚುನಾವಣೆಗೆ ಎಂ.ವಿ .ವೀರಭದ್ರಯ್ಯ ಆದ ನಾನುಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದರು.ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರದಿಂದ ನಾನು ಗೆದ್ದು ಬರುತ್ತೇನೆ.

ಸಣ್ಣಪುಟ್ಟ ಊಹಾಪೋಹಗಳಿಗೆ ಮಾಧ್ಯಮದ ಮೂಲಕ ತೆರೆ ಹೇಳಬೇಕಾಗುತ್ತದೆ.ಮುಂದಿನ ದಿನಗಳಲ್ಲಿ ಎಚ್. ಡಿ .ಕುಮಾರಸ್ವಾಮಿ ರವರನ್ನು ಈ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುವುದೇ ನಮ್ಮ ಗುರಿ.ನಾನು ಅಧಿಕಾರಿಯಾಗಿ ಸೇವೆ ಮಾಡಿದವನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದು ಕ್ಷೇತ್ರಕ್ಕೆ ಕೈಲಾದ ಮಟ್ಟಿಗೆ ಕೆಲಸ ಮಾಡಿದ್ದೇನೆ ಮುಖ್ಯವಾಗಿ ಕಾರ್ಯಕರ್ತರ ಒತ್ತಾಯ ಹೈಕಮಾಂಡ್ ಸೂಚನೆಯ ಮೇರೆಗೆ ನಾನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದೇನೆ.ಮಾಧ್ಯಮದವರು ಶಾಸಕರಾದ ಎಂ.ವಿ ವೀರಭದ್ರಯ್ಯನವರನ್ನು ಪ್ರಶ್ನೆ ಮಾಡಿ ಆರು ತಿಂಗಳ ಮುಂಚಿತವಾಗಿ ನಾನು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿಕೆ ಕೊಟ್ಟಿದ್ರಿ ಕಾರಣವೇನು ತಿಳಿಸಬಹುದಲ್ಲ ಎಂದು ಕೇಳಿದಾಗ ಹೊಸ ಅಭ್ಯರ್ಥಿ ಯಾರಾದರೂ ಬಂದರೆ ಪಕ್ಷದ ಸಂಘಟನೆ ಹಾಗೂ ಕಾರ್ಯಕರ್ತರನ್ನು ಮಾತನಾಡಿಸಲು ಸಮಯದ ಅಭಾವ ಇರುತ್ತದೆ ಆದ್ದರಿಂದ ಮುಂಚಿತವಾಗಿ ನಾನು ಹೇಳಿಕೆಯನ್ನು ಕೊಟ್ಟಿದ್ದೆ ಎಂದರು.

ಯುದ್ಧಕ್ಕೆ ಇಳಿದ ಮೇಲೆ ಹಿಂಜರಿಯುವಪ್ರಶ್ನೆಯೇ ಇಲ್ಲಾ ಮನಸ್ಸುಪೂರ್ವಕವಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡಿ ಎಲ್ಲರ ಜೊತೆಗೂಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಾನು ಶತಸಿದ್ಧನಾಗಿದ್ದೇನೆ ಮತ್ತು ಇದೊಂದು ದೊಡ್ಡ ಸಮರವಾಗಿದೆ ನಾನು ಕಾಯ .ವಾಚ. ಮನಸ್ಸುಪೂರ್ವಕವಾಗಿಎಲ್ಲರ ಜೊತೆಗೂಡಿ ಕೆಲಸ ಮಾಡುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರಾದ ತಿಮ್ಮರಾಯಪ್ಪ. ತಾಲೂಕು ಪರಿಶಿಷ್ಟ ಜಾತಿ ಜೆಡಿಎಸ್ ಅಧ್ಯಕ್ಷ ಗುಂಡಗಲ್ ಶಿವಣ್ಣ. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಆರ್ ಕೆ ರೆಡ್ಡಿ, ಪುರಸಭಾ ಸದಸ್ಯರಾದ ಚಂದ್ರಶೇಖರ್, ನಾಗರಾಜ, ಜೆಡಿಎಸ್ ನಗರ ಅಧ್ಯಕ್ಷ ಲೋಕೇಶ್, ಕೊಡಿನಗೇಹಳ್ಳಿ ನಾಸೀರ್ , ಮೋಹನ್ ಕುಮಾರ್ ,ವೆಂಕಟಪುರ ಗೋವಿಂದರಾಜು. ಕೊಡಿಗೆನಹಳ್ಳಿ ಶಿವಕುಮಾರ್, ಕಂಬತನ ಹಳ್ಳಿರಘು. ಮಂಜುನಾಥ್. ಶೈಲೂ. ಐ.ಡಿ.ಹಳ್ಳಿ ಹೋಬಳಿ ಅಧ್ಯಕ್ಷರಾದ ಹೂವಿನಹಳ್ಳಿ ರಾಮಚಂದ್ರಪ್ಪ. ಗ್ರಾಮ ಪಂಚಾಯತಿ ಸದಸ್ಯ ಜಿಲಾನ್ ಸಾಬ್, ವಜೀರ್ ಪಾಷಾ, ಸಾದರಹಳ್ಳಿ ಜಯಣ್ಣ ಹಾಗೂ ಅನೇಕ ಜೆಡಿಎಸ್ ಕಾರ್ಯಕರ್ತರು ಇದ್ದರು..

ವರದಿ:ಐ ಡಿ ಹಳ್ಳಿ ಯುವರಾಜ್

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5279

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5279

Notice: ob_end_flush(): failed to send buffer of zlib output compression (1) in /home2/sathyavi/public_html/wp-content/plugins/really-simple-ssl/class-mixed-content-fixer.php on line 107