ತುಮಕೂರುಸತ್ಯ ವಿಸ್ಮಯ ಪತ್ರಿಕೆ

ಭಕ್ತರ ಕಣ್ಮನ ಸೆಳೆದ ಗುಬ್ಬಿ ಶ್ರೀ ಚನ್ನಬಸವೇಶ್ವರಸ್ವಾಮಿ ಹಾಗೂ ಪಾರ್ವತಮ್ಮ ಸಮೇತ ಅಮರಗೊಂಡ ಶ್ರೀ ಮಲ್ಲಿಕಾರ್ಜುನಸ್ವಾಮಿ ಹೂವಿನ ವಾಹನ.

ಗುಬ್ಬಿ: ಇತಿಹಾಸ ಪ್ರಸಿದ್ದ ಗುಬ್ಬಿ ಗೋಸಲ ಶ್ರೀ ಚನ್ನಬಸವೇಶ್ವರಸ್ವಾಮಿ ಹಾಗೂ ಪಾರ್ವತಮ್ಮ ಸಮೇತ ಅಮರಗೊಂಡ ಶ್ರೀ ಮಲ್ಲಿಕಾರ್ಜನಸ್ವಾಮಿ ಅವರ ಹೂವಿನ ವಾಹನ ಇಡೀ ರಾತ್ರಿ ಅದ್ದೂರಿಯಾಗಿ ಜರುಗಿ, ಸ್ವಾಮಿಯ ದರ್ಶನ ಪಡೆದ ಸಾವಿರಾರು ಭಕ್ತರು ಪುಷ್ಪಾಲಂಕಾರ ರಥಗಳು ಕಂಡು ಕಣ್ಮನ ತುಂಬಿಕೊಂಡರು.

ಕಾರ್ತಿಕ ಮಾಸದ ಅಮಾವಾಸ್ಯೆಯ ರಾತ್ರಿ ನಡೆಯುವ ಈ ಹೂವಿನ ವಾಹನ ಪ್ರಸಿದ್ದಿಯಾಗಿದ್ದು ರಾಜ್ಯದೆಲ್ಲೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದಾರೆ. ದೇವಾಲಯದ ಬಳಿ ಸಿದ್ಧಗೊಳ್ಳುವ ಪುಷ್ಪದ ರಥವನ್ನು ನೋಡುವುದಕ್ಕೆ ಭಕ್ತರು ಬರುತ್ತಾರೆ. ಈ ಜೊತೆಗೆ ವಾಹನ ಸಂಚರಿಸುವ ರಾಜ ಬೀದಿಯಲ್ಲಿ ಭಕ್ತ ವೃಂದ ಅಲಂಕಾರ ಮಾಡಿ ಸ್ವಾಮಿ ಆಹ್ವಾನಕ್ಕೆ ಅಸಜ್ಜಾಗಿರುತ್ತಾರೆ.

ಭಕ್ತರ ಮನೆ ಹಾಗೂ ಅಂಗಡಿ ಮುಂದೆ ಬರುವ ವಾಹನಕ್ಕೆ ಅಂಬು ಹಾಯುವ ಮೂಲಕ ಪೂಜೆ ಸಲ್ಲಿಸುತ್ತಾರೆ. ಅಲಂಕಾರದ ಬಾಳೆಗಿಡ ಅಂಬು ನೋಡುವುದೇ ಒಂದು ಆನಂದ. ಬಾಳೆಕಾಯಿ ಬಿಟ್ಟ ಗಿಡವನ್ನು ತಮ್ಮ ಮನೆ ಅಂಗಡಿ ಮುಂದೆ ನೆಟ್ಟು ಬಣ್ಣ ಬಣ್ಣದ ರಂಗೋಲಿ ಚಿತ್ತಾರ ಬಿಡಿಸಿ ಹೂವು ಮತ್ತು ವಿದ್ಯುದ್ದೀಪಾಲಂಕಾರ ಮಾಡಿರುತ್ತಾರೆ. ಒಂದಕ್ಕಿಂತ ಒಂದು ಭಿನ್ನವಾಗಿ ಕಾಣುವ ಅಂಬು ಭಕ್ತರ ಮೊಬೈಲ್ ಪೋಟೋ ವಿಡಿಯೋ ಆಗಿ ಸೇರಿವೆ.

ರಾತ್ರಿ 11 ರ ನಂತರ ದೇವಾಲಯದಿಂದ ಹೊರಡುವ ಎರಡು ಪುಷ್ಪ ರಥಗಳು ವಾದ್ಯಗೋಷ್ಠಿ, ಅನೇಕ ಕಲಾ ಪ್ರಕಾರ ತಂಡದೊಂದಿಗೆ ಹೊರಡುವ ಮೆರವಣಿಗೆ ಮಾರ್ಗ ಮಧ್ಯೆ ಭಕ್ತರ ಪೂಜೆ ಪಡೆದು ಮುಂದೆ ಸಾಗುತ್ತದೆ. ಮುಂಜಾನೆ ವೇಳೆಗೆ ಪಟ್ಟಣದ ಬಂಗ್ಲೋ ಮಠದ ಬಳಿ ವಿರಾಜಮಾನವಾಗಲಿದೆ. ನಂತರ ಬೆಳಿಗ್ಗೆ ಸ್ವಾಮಿಯವರನ್ನು ಪಲ್ಲಕ್ಕಿಯಲ್ಲಿ ಹಲವು ಭಕ್ತರ ಮನೆ ತಲುಪಿ ಸಂಜೆಯವರೆಗೆ ಪೂಜೆ ಕೈಂಕರ್ಯ ನಡೆದು ಸಂಜೆ ಚಿಕ್ಕ ಗುಬ್ಬಿಯಪ್ಪ ದೇವಾಲಯ ತಲುಪಿ ಹೂವಿನ ವಾಹನ ಜಾತ್ರೆ ಸಂಪನ್ನ ಆಗಲಿದೆ.

ವರದಿ: ರಾಘವೇಂದ್ರ ಗುಬ್ಬಿ

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5279

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5279

Notice: ob_end_flush(): failed to send buffer of zlib output compression (1) in /home2/sathyavi/public_html/wp-content/plugins/really-simple-ssl/class-mixed-content-fixer.php on line 107