ತುಮಕೂರುಸತ್ಯ ವಿಸ್ಮಯ ಪತ್ರಿಕೆ

ಗುಬ್ಬಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಡಾ.ಚಿಕ್ಕಣ್ಣ ಎಣ್ಣೆಕಟ್ಟೆ ಸರ್ವಾನುಮತದಿಂದ ಆಯ್ಕೆ.

ಗುಬ್ಬಿ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಗುಬ್ಬಿ ತಾಲ್ಲೂಕು 5 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಹಿರಿಯ ಸಾಹಿತಿ ಡಾ.ಚಿಕ್ಕಣ್ಣ ಎಣ್ಣೆಕಟ್ಟೆ ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.

ಗುಬ್ಬಿ ತಾಲ್ಲೂಕಿನ ಚೇಳೂರು ಗ್ರಾಮದ ಶ್ರೀ ಮಲ್ಲಿಕಾರ್ಜುನಸ್ವಾಮಿ ಶಾಲೆ ಆವರಣದಲ್ಲಿ ನಡೆದ
ಸಭೆಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ನಡೆಸಿದ ಗುಬ್ಬಿ ತಾಲ್ಲೂಕಿನ ಮೂಲದ ಸಾಹಿತಿ ಹುಡುಕಾಟದಲ್ಲಿ ಚಿಕ್ಕಣ್ಣ ಅವರ ಹೆಸರು ಒಮ್ಮತದಲ್ಲಿ ಕೇಳಿ ಬಂತು. ಈ ಹಿನ್ನಲೆ ಸರ್ವಾನುಮತದ ಆಯ್ಕೆ ನಡೆಯಿತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಯೋಗಾನಂದ ಮಾತನಾಡಿ ರಾಜ್ಯ ಕಂಡ ಜನಪದ ಕಲೆಯ ತಜ್ಞರಾಗಿರುವ ಡಾ.ಚಿಕ್ಕಣ್ಣ ಎಣ್ಣೆಕಟ್ಟೆ ಅವರು ಚೇಳೂರು ಭಾಗದಲ್ಲಿ ಉತ್ತಮ ಸಾಹಿತಿಯಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿ ಸುಮಾರು 69 ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ನೂರಾರು ಕಲಾವಿದರಿಗೆ ಮಾಸಾಶನ, ಪ್ರಶಸ್ತಿಗಳನ್ನು ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಹಂಪಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಹಾಗೂ ಎಂ.ಪಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ರಾಷ್ಟ್ರಪತಿ ಬೆಳ್ಳಿ ಪದಕ ಮತ್ತು ರಾಜ್ಯದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಪಡೆದ ಇಂತಹ ಸಾಹಿತಿಯನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಶ್ಲಾಘನೀಯ. ನಮ್ಮೆಲ್ಲರ ಹೆಮ್ಮೆ ಎಂದು ತಿಳಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯತೀಶ್ ಮಾತನಾಡಿ ಹೋಬಳಿ ಕೇಂದ್ರದಲ್ಲಿ ಸಾಹಿತ್ಯ ಚಟುವಟಿಕೆ ನಡೆಸುವ ಚಿಂತನೆಯಲ್ಲಿ ಚೇಳೂರು ಗ್ರಾಮದಲ್ಲಿ ಸಮ್ಮೇಳನ ಆಯೋಜನೆ ಆಗಲಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಸಾಹಿತಿಗಳು ಸಮ್ಮೇಳನಾಧ್ಯಕ್ಷರ ಆಯ್ಕೆ ಎಲ್ಲರಿಗೂ ಸಂತಸ ತಂದಿದೆ. ಸುಮಾರು 9 ಸಮಿತಿಗಳನ್ನು ರಚನೆ ಮಾಡಿದ್ದು, ಈ ಸಮ್ಮೇಳನ ಯಶಸ್ವಿಗೆ ಕನ್ನಡ ಆಸಕ್ತರು, ಸಂಘ ಸಂಸ್ಥೆಗಳು, ಅಧಿಕಾರಿಗಳು ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಕಸಾಪ ಹೋಬಳಿ ಅಧ್ಯಕ್ಷ ಹರೀಶ್, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಮಾ ಮಹೇಶ್, ಕುಮಾರಸ್ವಾಮಿ, ಮುಖಂಡರಾದ ವೆಂಕಟೇಶ್, ಮುಖ್ಯೋಪಾಧ್ಯಾಯ ಡಾ.ಕೃಷ್ಣಪ್ಪ, ಮುಖಂಡರಾದ ಸಿ.ಎಂ.ಹಿತೇಶ್, ಉಮೇಶ್, ಕಾರ್ತಿಕೇಯನ್, ಗುರುಲಿಂಗಯ್ಯ, ಸಿ ಎಸ್ ಶಿವಕುಮಾರ್, ನಟರಾಜು, ಮಲ್ಲಿಕಾರ್ಜುನಯ್ಯ, ಸಿದ್ದಪ್ಪ, ಸತೀಶ್, ಸೋಮಶೇಖರ್, ಡಾ.ಕಿರಣ್, ಸಿ.ವಿ.ಎನ್ ಮೂರ್ತಿ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

ವರದಿ: ರಾಘವೇಂದ್ರ ಗುಬ್ಬಿ

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5279

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5279

Notice: ob_end_flush(): failed to send buffer of zlib output compression (1) in /home2/sathyavi/public_html/wp-content/plugins/really-simple-ssl/class-mixed-content-fixer.php on line 107