ಬೆಂಗಳೂರು ಗ್ರಾಮಾಂತರ ಜಿಲ್ಲೆಸತ್ಯ ವಿಸ್ಮಯ

ನಿಸರ್ಗ ಶೇ.75 ಪರ್ಸೆಂಟ್‌ ಭ್ರಷ್ಟಾಚಾರದ ಶಾಸಕ

ದೇವನಹಳ್ಳಿ: ‘ಜೆಡಿಎಸ್‌ ನ ಶಾಸಕ ನಿಸರ್ಗ ನಾರಾಯಣಸ್ವಾಮಿ ಕಡು ಭ್ರಷ್ಟರಾಗಿದ್ದು, ಎಲ್ಲ ಕಾಮಗಾರಿಗಳಲ್ಲಿಯೂ ಶೇ 75ರಷ್ಟು ಲಂಚ ಪಡೆಯುತ್ತಿದ್ದಾರೆ. 2 ಕೋಟಿ ಮೌಲ್ಯ ಶಾಸಕರ ಅನುದಾನದಲ್ಲಿ ಹೈ ಮಾಸ್ಕ್‌ ಲೈಟ್‌ ಅಳವಡಿಸಿದ್ದು, ಇದರ ಬೆಲೆ 1.5 ಲಕ್ಷವಿದ್ದರೇ ಅದಕ್ಕೆ 5 ಲಕ್ಷ ಬಿಲ್‌ ಮಾಡಿಸಿ ಲೂಟಿ ಮಾಡಿದ್ದಾರೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್‌ ಆರೋಪಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜನಪ್ರತಿನಿಧಿಯಾಗಿ ಕನಿಷ್ಠ ಆಡಳಿತ ಸಭೆಗಳನ್ನು ನಡೆಸುವುದಿಲ್ಲ, ಕೆಡಿಪಿ ಸಭೆಗಳಲ್ಲಿ ಗೈರಾಗಿ, ಜನರಿಗೆ ದ್ರೋಹ ಮಾಡುತ್ತಿದ್ದಾರೆ. ತಾಪಂ ಸಭೆಗಳನ್ನು ಮಾಡದಷ್ಟು ಅಸಮರ್ಥರಾಗಿದ್ದಾರೆ’ ಎಂದು ಟೀಕಿಸಿದರು.ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ‘ಯಾವ ರೀತಿಯಲ್ಲಿ ಅನುದಾನವನ್ನು ಬಳಕೆ ಮಾಡಿಕೊಳ್ಳಬೇಕೆಂದು ತಿಳುವಳಿಕೆ ಶಾಸಕರಿಗೆ ಇಲ್ಲ, ಚುನಾವಣೆ ಗಿಮಿಕ್‌ಗಾಗಿ ಅನುದಾನ ಬಿಡುಗಡೆಯಾದ ನಂತರ ಬೀದಿಗಳಿದು ರಾಗಿ ಪೈರು ನಾಟಿ ಮಾಡಿ, ನನ್ನ ಕೈಯಲ್ಲಿ ಏನು ಆಗುತ್ತಿಲ್ಲ ಎಂದು ಅಸಮರ್ಥತೆ ತೋರುತ್ತಿದ್ದಾರೆ.

ಟೆಂಡರ್‌ ಪ್ರಕ್ರಿಯೆ ರಾಜಕೀಯ ಹಸ್ತಕ್ಷೇಪವಿಲ್ಲದೆ ಪಾರದರ್ಶಕತೆಯಿಂದ ನಡೆಯುತ್ತದೆ. ಅಭಿವೃದ್ಧಿಗಾಗಿ ಎಲ್ಲ ನಾಯಕರ ಸಹಕಾರ ಪಡೆದುಕೊಂಡು ಮುನ್ನೆಡೆಯಬೇಕು, ಪಕ್ಷಾತೀತವಾಗಿ ಕೆಲಸ ಮಾಡಲು ಧೈರ್ಯವಿರಬೇಕು’ ಎಂದು ಸಲಹೆ ನೀಡಿದರು.ಮಾಜಿ ಶಾಸಕ ಚಂದ್ರಣ್ಣ ಮಾತನಾಡಿ, ‘ಶಾಸಕರ ಅನುದಾನದಲ್ಲಿ ತುರ್ತು ಕೆಲಸ ಮಾಡಿಸಬೇಕು, ಅದರಲ್ಲಿ ರಸ್ತೆ ದುರಸ್ತಿ ಮಾಡಿಸಬಹುದು, ಆದರೇ ಜನರಿಗೆ ಮಂಕು ಬುದ್ಧಿ ಎರಚಿ ಹೋರಾಟ ಮಾಡುತ್ತಿದ್ದಾರೆ.

ನಾಲ್ವರು ಬಾಲಂಗೋಚಿಗಳನ್ನು ಹಿಂದೆ ಹಾಕಿಕೊಂಡು ಪ್ರತಿಭಟನೆ ಮಾಡಿದರೇ ಕ್ಷೇತ್ರ ಅಭಿವೃದ್ಧಿ ಆಗುವುದಿಲ್ಲ. 4 ವರ್ಷದಿಂದ ಅಭಿವೃದ್ಧಿ ಮರೆತವರು ಇಂದು ಬೀದಿಗಿಳಿದು ನಾನೊಬ್ಬ ಅಸಮರ್ಥ ಎಂದು ಕೂಗಿ ಹೇಳುತ್ತಿದ್ದಾರೆ’ ಎಂದು ಚಾಟಿ ಬಿಸಿದರು.ಬೈಯಪ್ಪ ಮಾಜಿ ಅಧ್ಯಕ್ಷ ಅಶ್ವತ್ಥ ನಾರಾಯಣ ಮಾತನಾಡಿ, ‘ರಿಯಲ್‌ ಎಸ್ಟೇಟ್‌ ವ್ಯವಹಾರದ ಲೇಔಟ್‌ ಮಾಡುವಲ್ಲಿರುವ ಆಸಕ್ತಿ ದೇವನಹಳ್ಳಿ ಟೌನ್‌ ಅಭಿವೃದ್ಧಿ ಮಾಡುವಲ್ಲಿಯೂ ಇರಬೇಕು, 4 ವರ್ಷದಿಂದ ವೈಯಕ್ತಿಕ ಕೆಲಸದಲ್ಲಿ ಮಗ್ನರಾಗಿ ಚುನಾವಣೆ ಹತ್ತಿರ ಬಂದಾಗ ರಸ್ತೆಯಲ್ಲಿ ಹೈಡ್ರಾಮಾ ಮಾಡಿ, ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು.

ಚುನಾವಣೆಯಲ್ಲಿ ತಕ್ಕ ಉತ್ತರ ಮತದಾರ ಪ್ರಭುಗಳು ನೀಡುತ್ತಾರೆ’ ಎಂದರು. ಜಿಲ್ಲಾ ಅಧ್ಯಕ್ಷ ಎವಿಎನ್ ನಾರಾಯಣಸ್ವಾಮಿ, ತಾಲ್ಲೂಕು ಅಧ್ಯಕ್ಷ ಸುಂದರೇಶ್, ಟೌನ್ ಉಪಾಧ್ಯಕ್ಷ ಅಂಬರೀಶ್, ಪುರಸಭಾ ಸದಸ್ಯ ಬಾಂಬೆ ನಾರಾಯಣಸ್ವಾಮಿ, ವಿಶ್ವನಾಥ್ ಪುರ ಪಂಚಾಯತಿ ಉಪಾಧ್ಯಕ್ಷ ವಿನಯ್ ಕುಮಾರ್, ಮುಖಂಡರಾದ ದೇಸು ನಾಗರಾಜ್, ನಿಲೇರಿ ಮಂಜುನಾಥ್, ಭರತ್, ಸಂದೀಪ್‌ ಇದ್ದರು.

ವರದಿ:ಹರ್ಷ ಪಿ ಸತ್ಯ ವಿಸ್ಮಯ ಪತ್ರಿಕೆ ದೇವನಹಳ್ಳಿ

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5279

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5279

Notice: ob_end_flush(): failed to send buffer of zlib output compression (1) in /home2/sathyavi/public_html/wp-content/plugins/really-simple-ssl/class-mixed-content-fixer.php on line 107