ಸತ್ಯ ವಿಸ್ಮಯ

ಕರ್ನಾಟಕ ರಕ್ಷಣ ವೇದಿಕೆ ತಾಲೂಕು ನೂತನ ಪದಾಧಿಕಾರಿಗಳ ಆಯ್ಕೆರಾಜ್ಯಾಧ್ಯಕ್ಷರ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ವಿಜೃಂಭಣೆ ಆಚರಣೆಗೆ ತಾಲೂಕಿನಿಂದ ಭಾಗಿ

ದೇವನಹಳ್ಳಿ: ನ.೧ರಂದು ಕನ್ನಡ ರಾಜ್ಯೋತ್ಸವದಲ್ಲಿ ತಾಲೂಕಿನ ಕನ್ನಡ ರಕ್ಷಣಾ ವೇದಿಕೆಯ ಎಲ್ಲಾ ಕಾರ್ಯಕರ್ತರು ಸೇರಿ ಗಾಂಧಿನಗರದ ಕೇಂದ್ರ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯವಾಗಿ ಆಚರಿಸಲಾಗುವುದು ಎಂದು ಕರ್ನಾಟಕ ರಕ್ಷಣ ವೇದಿಕೆ (ನಾರಾಯಣಗೌಡ ಬಣ) ರಾಜ್ಯ ಉಪಾಧ್ಯಕ್ಷ ನೀಲೇರಿ ಅಂಬರೀಶ್ ಗೌಡ ತಿಳಿಸಿದರು.ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದರಿದಲ್ಲಿ ಕರವೇ ನಾರಾಯಣಗೌಡ ಬಣದ ತಾಲೂಕು ಪದಾಧಿಕಾರಿಗಳನ್ನು ನೂತನವಾಗಿ ಆಯ್ಕೆ ಮಾಡಲಾಗುತ್ತಿದ್ದು,

ತಾಲೂಕು ಅಧ್ಯಕ್ಷರಾದ ಹೇಮಂತ್, ಉಪಾಧ್ಯಕ್ಷ ಎಂ.ಜೆ.ಶ್ರೀನಿವಾಸ್ ಅವರ ಸಮ್ಮುಕದಲ್ಲಿ ನೂತನ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆಸಲಾಗುತ್ತದೆ. ರೈತ ಘಟಕಕ್ಕೆ ವೆಂಕಟೇಶ್, ಕಾರ್ಮಿಕ ಘಟಕಕ್ಕೆ ಶ್ರೀನಿವಾಸ್, ಜಿಲ್ಲಾ ಕಾರ್ಮಿಕ ಘಟಕಕ್ಕೆ ಅನಿಲ್, ಮಾದ್ಯಮ ಘಟಕಕ್ಕೆ ಮಧುಚಂದ್ರ, ಶೆಟ್ಟೇರಹಳ್ಳಿ ಮೂರ್ತಿ ಸೇರಿದಂತೆ ಹಿಂದೆ ಇದ್ದಂತಹ ಕಾರ್ಯಕರ್ತರನ್ನು ಮುಂದುವರಿಸಲಾಗಿದೆ ಎಂದು ಹೇಳಿದರು.ಕನ್ನಡ ಭಾಷೆಯನ್ನು ಮತ್ತಷ್ಟು ಬೆಳೆಸಲು ಹಾಗೂ ಅಭಿವೃದ್ಧಿಪಡಿಸಲು ಎಲ್ಲ ಕನ್ನಡ ಭಾಷಿಗರು ಒಗ್ಗೂಡಿ ನ.೧ರಂದು ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಬೆಂಗಳೂರಿನ ಗಾಂಧಿನಗರದಲ್ಲಿರುವ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರ ನೇತೃತ್ವದಲ್ಲಿ ಸಚಿವ ಅಶ್ವತ್ಥ್‌ನಾರಾಯಣ್ ಹಾಗೂ ಹಲವಾರು ಸಚಿವರುಗಳ ಸಹಭಾಗಿತ್ವದಲ್ಲಿ ಕನ್ನಡ ರಾಜ್ಯೋತ್ಸವವನ್ನು ಬಹಳ ವಿಜೃಭಣೆಯಿಂದ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ವರದಿ:ಹರ್ಷ ಪಿ ಸತ್ಯ ವಿಸ್ಮಯ ಪತ್ರಿಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆ

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5279

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5279

Notice: ob_end_flush(): failed to send buffer of zlib output compression (1) in /home2/sathyavi/public_html/wp-content/plugins/really-simple-ssl/class-mixed-content-fixer.php on line 107