ಚಿಕ್ಕಬಳ್ಳಾಪುರಸತ್ಯ ವಿಸ್ಮಯ

ಡಾ.ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ಪ್ರಯುಕ್ತ 112 ಕ್ಷಯ ರೋಗಿಗಳನ್ನು ದತ್ತುಪಡೆದ :-ಆರ್ .ಮಿಥುನ್ ರೆಡ್ಡಿ

ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಾ.ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ 112 ಕ್ಷಯ ರೋಗಿಗಳನ್ನು ದತ್ತು ಪಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಕ್ಷಯಾ ರೋಗ ಅಧಿಕಾರಿ ರಮೇಶ್ ಹಾಗೂ ತಾಲ್ಲೂಕು ವೈದ್ಯಾಧಿಕಾರಿ ಸಿ. ಎನ್ ಸತ್ಯ ನಾರಾಯಣರೆಡ್ದಿ ನೇತೃತ್ವದಲ್ಲಿ ಎಂ .ಆರ್ ಸ್ವಾಭಿಮಾನಿ ಫೌಂಡೇಶನ್ ವಂತಿಯಿಂದ ಶನಿವಾರ ಆಯೋಜಿಸಲಾಗಿತು ಈ ಕಾರ್ಯಕ್ರಮದಲ್ಲಿ ಎಂ .ಆರ್ .ಸ್ವಾಭಿಮಾನಿ ಫೌಂಡೇಶನ್ ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಆರ್. ಮಿಥುನ್ ರೆಡ್ದಿಯವರು 112 ಕ್ಷಯ ರೋಗಿಗಳನ್ನು ದತ್ತು ಪಡೆದು ಅವರಿಗೆ ನ್ಯೂಟ್ರೀಷಿಯನ್ ಕಿಟ್ ವಿತರಣೆ ಮಾಡಲಾಯಿತು

ಕಿಟ್ ನಲ್ಲಿ ಕ್ಷಯ ರೋಗಿಗಳಿಗೆ ಅತ್ಯವಶ್ಯಕವಾದ ಆಹಾರ ಪದಾರ್ಥಗಳು ಪ್ರೋಟಿನ್ ಪೌಡರ್ ಹಾಗೂ ಒಂದು ತಿಂಗಳಿಗೆ ಆಗುವಷ್ಟು ಮೊಟ್ಟೆಗಳನ್ನು ನೀಡಿ ಮಾತನಾಡಿದ ಅವರು ಬಾಗೇಪಲ್ಲಿ ಕ್ಷೇತ್ರದಲ್ಲಿ ಕ್ಷಯ ರೋಗಿಗಳಿಗೆ ಉತ್ತಮ ಗುಣಮಟ್ಟದ ಸೇವೆ ನೀಡುವ ಮೂಲಕ ಕ್ಷಯ ರೋಗ ನಿರ್ಮೂಲನೆಯಲ್ಲಿ ತೊಡಗಿಸಿಕೊಂಡಿದೇವೆ, ಕ್ಷಯ ರೋಗದಿಂದ ಬಳಲುತ್ತಿದ್ದ ರೋಗಿಗಳ ಪಾಲಿಗೆ ಪೌಷ್ಟಿಕ ಆಹಾರವು ಅತ್ಯವಶ್ಯಕ ಅವರಿಗೆ ಅಗತ್ಯವಿರುವ ಪೌಷ್ಟಿಕಾಂಶಗಳು ನೀಡುವುದರಿಂದ ಆದಷ್ಟು ಬೇಗ ಗುಣಮುಖರಾಗುತ್ತಾರೆ ಹಾಗೂ ಕ್ಷಯರೋಗ (ಟಿಬಿ) ಉಂಟಾದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಬಹುದು.

ಕೇಂದ್ರ ಸರ್ಕಾರ 2030 ರೊಳಗೆ ಭಾರತವನ್ನು ಕ್ಷಯ ರೋಗ ಮುಕ್ತ ಮಾಡುವ ಗುರಿ ಹೊಂದಿದೆ. ಇದಕ್ಕೆ ಪೂರಕವಾಗಿ ಬಾಗೇಪಲ್ಲಿ ತಾಲ್ಲೂಕು ನ್ನು 2023 ರೊಳಗೆ ಕ್ಷಯರೋಗ ನಿರ್ಮೂಲನೆ ಮಾಡುವ ಪ್ರಯತ್ನ ಮಾಡಬೇಕು “ಕ್ಷಯ ರೋಗ ಮುಕ್ತ ಬಾಗೇಪಲ್ಲಿ ಗೆ ಸಾರ್ವಜನಿಕರು, ವೈದ್ಯರು, ಆಶಾ ಕಾರ್ಯಕರ್ತೆಯರು ಕೈ ಜೋಡಿಸಬೇಕೆಂದರು ಅಷ್ಟೇ ಅಲ್ಲದೆ ಬಾಗೇಪಲ್ಲಿ , ಗುಂಡಿಬಂಡೆ, ಚೇಳೂರು ಕ್ಷೇತ್ರದಲ್ಲಿ ಗರ್ಭಕೋಶ ಸಮಸ್ಯೆ ಯಿಂದ ನರಳುತ್ತಿರುವ ಮಹಿಳೆಯರಿಗೆ ನಮ್ಮ ಫೌಂಡೇಶನ್ ವತಿಯಿಂದ ಉಚಿತವಾಗಿ ಚಿಕಿತ್ಸೆ ನೀಡಲು ಸದಾ ಸಿದ್ಧವಾಗಿದ್ದೇವೆ ಅಂತಹವರು ನಮ್ಮನ್ನು ಸಂಪರ್ಕ ಮಾಡಬಹುದು

ಹಾಗೂ ಪ್ರತಿಯೊಂದು ಹಳ್ಳಿಗೂ ಮೊಬೈಲ್ ಆಂಬುಲೆನ್ಸ್ ಸೇವೆ ಮಾಡಲು ನಿರ್ಧಾರ ಮಾಡಿದ್ದೇವೆ ಅತಿ ಶೀಘ್ರದಲ್ಲಿ ಮೊಬೈಲ್ ಆಂಬುಲೆನ್ಸ್ ಮೂಲಕ ರೋಗಿಗಳು ಚಿಕಿತ್ಸೆ ಪಡೆಯಬಹುದು ಎಂದರುತಂದನಂತರ ಆಶಾ ಕಾರ್ಯಕರ್ತೆರಿಗೆ ಹಾಗೂ ಪುರಸಭೆಯ ಪೌರ ಕಾರ್ಮಿಕರಿಗೆ ಆಹಾರ ಕಿಟ್’ಗಳನ್ನು ವಿತರಣೆ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ಎಂ .ಜಿ ಕಿರಣ್ ಕುಮಾರ್ , ಮಾಜಿ ನಿರ್ದೇಶಕ ಎಂ.ಎಲ್ ವೆಂಕಟರಂಗಾರೆಡ್ಡಿ ,ಒಕ್ಕಲಿಗರ ಸಂಘದ ಕಾರ್ಯದರ್ಶಿ ವಿ .ಎನ್ .ಸೋಮಶೇಖರ್ ರೆಡ್ಡಿ, ಭೂ ಅಭಿವೃದ್ದಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್ .ನರಸಿಂಹ ರೆಡ್ಡಿಮಿಥುನ್ ರೆಡ್ದಿ ಬಳಗದ ಹಿರಿಯರು ಹಾಗೂ ಯುವ ಮುಖಂಡರು ಪಾಲ್ಗೊಂಡಿದ್ದರು.

ವರದಿ:ಶಾಂತಿ ಚಿಕ್ಕಬಳ್ಳಾಪುರ ಜಿಲ್ಲೆ

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5279

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5279

Notice: ob_end_flush(): failed to send buffer of zlib output compression (1) in /home2/sathyavi/public_html/wp-content/plugins/really-simple-ssl/class-mixed-content-fixer.php on line 107