ಪಾವಗಡದಲ್ಲಿ ಕೊರೊನಾ ಲಸಿಕೆ, ಟೆಸ್ಟಿಂಗ್ ಸೆಂಟರ್ ಬದಲಾವಣೆ

ಪಾವಗಡ: ಕೊರೊನಾದ ಒಂದನೇ ಅಲೆ ಜನರನ್ನು ನಿದ್ದೆಗೆಡಿಸುವಂತೆ ಮಾಡಿತ್ತು.ಆದರೆ ಎರಡನೇ ಅಲೆ ಹಳ್ಳಿ ಹಳ್ಳಿಗೂ ವ್ಯಾಪಿಸಿರುವುದರಿಂದ ಅಕ್ಷರಶಃ ಅದರ ಪರಿಣಾಮ ಜನಸಾಮಾನ್ಯರನ್ನು ಬೆಚ್ಚಿ ಬೀಳಿಸುತ್ತಿದೆ.ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿವೆ ಜೊತೆಗೆ ಸಾವಿನ ಸಂಖ್ಯೆಯಲ್ಲೂ ಕಲ್ಪನೆ ಮೀರಿ ಸಂಭವಿಸುತ್ರಿರುವುದು ಜನತೆಯನ್ನು ಆತಂಕಕ್ಕೆ ದೂಡುವಂತೆ ಮಾಡಿದೆ.

ಪಾವಗಡ ತಾಲ್ಲೂಕಿನಾದ್ಯಂತ ಕೊರೊನಾ ಸೋಂಕಿನ ಬಿಸಿ ತಟ್ಟಿ ಜನರು ಸಾವು ನೋವಿನ ನಡುವೆ ಸರ್ಕಾರಿ ಆಸ್ಪತ್ರೆಗೆ ಎಡತಾಕುತ್ತಿದ್ದಾರೆ. ರೋಗದ ಪರೀಕ್ಷೆಗೆಂದು ಬರುವ ರೋಗಿಗಳ ಸಂಖ್ಯೆಯಲ್ಲಿ ಗರಿಷ್ಠ ವಾಗುತ್ತಿರುವುದರಿಂದ ತಾಲ್ಲೂಕು ಆಡಳಿತ ಎಚ್ಚೆತ್ತು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟಿಂಗ್, ವ್ಯಾಕ್ಸಿನ್ ನೀಡಲಾಗುತ್ತಿತ್ತು. ಜನರು ಹೆಚ್ಚಾದ ಹಿನ್ನೆಲೆ ಕಸ್ತೂರಿ ಬಾ ಗಾಂಧಿ ಬಾಲಿಕಾ ವಸತಿ ಶಾಲೆಯಲ್ಲಿ ಕೋವಿಡ್ ಲಸಿಕೆ( covid vaccine) ಮತ್ತು ಶ್ರೀ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಕೋವಿಡ್ ಟೆಸ್ಟಿಂಗ್( covid testing) ನಡೆಸಲಾಗುತ್ತಿದೆ. ಆಗಾಗಿ ಸಾರ್ವಜನಿಕರ ಕೊರೊನಾ ಸುರಕ್ಷತಾ ನಿಯಮಗಳನ್ನು ಪಾಲಿಸಿ ಸಹಕರಿಸಿ ಎಂದು ತಾಲ್ಲೂಕು ತಹಶೀಲ್ದಾರ್ ಕೆ.ಆರ್.ನಾಗರಾಜುರವರು ತಿಳಿಸಿದ್ದಾರೆ.
ವರದಿ: ನವೀನ್ ಕಿಲಾರ್ಲಹಳ್ಳಿ