ತುಮಕೂರುಸತ್ಯ ವಿಸ್ಮಯ ಪತ್ರಿಕೆ

ಕೃಷಿ ಸಂಸ್ಕರಣ ಮಾರಾಟ ಸಹಕಾರ ಸಂಘದ ಅಧ್ಯಯನ ಪ್ರವಾಸ.

ತಿಪಟೂರು ಕೃಷಿ ಉತ್ಪನ್ನಗಳ ಸಂಸ್ಕರಣ ಹಾಗೂ ಮಾರಾಟ ಸಹಕಾರ ಸಂಘ ತಿಪಟೂರು. ಇದರ ಅಧ್ಯಯನ ಪ್ರವಾಸವನ್ನು ಶಿವಮೊಗ್ಗದ ಮಲೆನಾಡು ಅಡಿಕೆ ಉತ್ಪಾದಕರ ಸಹಕಾರ ಸಂಘದಲ್ಲಿ ಸಿರಸಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಟಿಎಸ್ಎಸ್, ಟಿಎಮ್ಎಸ್, ಮತ್ತು ಕದಂಬ ಸಹಕಾರ ಸಂಘಗಳಿಗೆ ಭೇಟಿ ನೀಡಿ

ಅಲ್ಲಿನ ಸಹಕಾರಿ ಸಂಘಗಳ ಮೂಲಕ ಮಾರುಕಟ್ಟೆ ವ್ಯವಸ್ಥೆ, ರೈತರು ಬದುಕು ಕಟ್ಟಿಕೊಳ್ಳಲು ವಿಮೆ ಸೌಲಭ್ಯ, ಆರೋಗ್ಯ ದೃಷ್ಟಿಕೋನದ ಆರೋಗ್ಯ ವಿಮೆಗಳು, ಬೆಳೆಗಳ ಬೆಲೆ ಸ್ಥಿರತೆ, ಅಡಮಾನ ಸಾಲ ಸೌಲಭ್ಯ, ಸದಸ್ಯರಿಗೆ ಒಂದೇ ಸೂರಿನಡಿ ದಿನಬಳಕೆ ಹಾಗೂ ಕೃಷಿ ಉತ್ಪನ್ನಗಳು ಒಂದೇ ಕಡೆ ಸಿಗುವಂತೆ ಮಾಡಿರುವ, ಉತ್ಪನ್ನಗಳ ಮೌಲ್ಯವರ್ಥನೆ ಬಗ್ಗೆ, ವಿವಿಧ ಬಗೆಯ ಅಡಿಕೆ, ಮೆಣಸು ವಿವಿಧ ಬಗೆಯ ವಾಣಿಜ್ಯ ಬೆಳೆಗಳ ತಳಿಗಳ ಬಗ್ಗೆ, ಸಹಕಾರ ಸಂಘಗಳ ರಚನೆ, ಸ್ಥಾಪನೆ, ಅಭಿವೃದ್ಧಿಯ ದೃಷ್ಟಿಕೋನದ ವ್ಯವಸ್ಥೆಯ ಬಗ್ಗೆ ಸಹಕಾರ ಸಂಘಗಳಿಗೆ ಭೇಟಿ ನೀಡಿ

ಶಿರಸಿ ಎಪಿಎಂಸಿ ಅಧ್ಯಕ್ಷ ಅಧ್ಯಕ್ಷ ಪ್ರಶಾಂತ್ ಬಸಪ್ಪ ಗೌಡ, ಶಿವಮೊಗ್ಗ ಮಲೆನಾಡು ಅಡಿಕೆ ಉತ್ಪಾದಕರ ಸಹಕಾರ ಸಂಘದ ಪ್ರಧಾನ ವ್ಯವಸ್ಥಾಪಕ ಜಯಂತಿಯವರು ಮಾಹಿತಿಯನ್ನು ನೀಡಿದರು. ತಿಪಟೂರು ಕೃಷಿ ಉತ್ಪನ್ನಗಳ ಸಂಸ್ಕರಣ ಹಾಗೂ ಮಾರಾಟ ಸಹಕಾರ ಸಂಘದ ಮುಖ್ಯ ಪ್ರವರ್ತಕರು ತ್ರಿಯಭಕ, ನಿವೃತ್ತ ಉಪ ವ್ಯವಸ್ಥಕರಾದ ಸಿದ್ದರಾಮಣ್ಣ, ಎಪಿಎಂಸಿ ಅಧ್ಯಕ್ಷ ದಿವಾಕರ್ ಹೋಗನಘಟ್ಟ, ಕೃಷಿಕ ಸಮಾಜದ ಅಧ್ಯಕ್ಷ ಕೆರಗೋಡಿ ದೇವರಾಜ್, ಹಳೇಪಾಳ್ಯ ಸದಾಶಿವು, ಮಾರನಗೆರೆ ಮಂಜುನಾಥ್, ಶ್ರೇಷ್ಠನಾಥ್, ಅಶೋಕ್ ಕುಮಾರ್, ಹೊನ್ನೇನಹಳ್ಳಿ ಯಶೋದಮ್ಮ, ಬಿಸಲೇಹಳ್ಳಿ ಜಗದೀಶ್, ಕೆ.ಬೀ ಕ್ರಾಸ್ ಶಿವಕುಮಾರ್, ಯತಿಕ್, ದೊಡ್ಡಯ್ಯ,ಮಹಾಂತೇಶ್, ಸ್ವಾಮಿ, ಮನೋಹರ್ ರಂಗಾಪುರ, ಕರಿಕೆರೆ ಪ್ರಶಾಂತ್ ಹಾಜರಿದ್ದರು.

ವರದಿ: ಸ್ವಾಮಿ ತಿಮ್ಮಲಾಪುರ .

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5279

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5279

Notice: ob_end_flush(): failed to send buffer of zlib output compression (1) in /home2/sathyavi/public_html/wp-content/plugins/really-simple-ssl/class-mixed-content-fixer.php on line 107