ತುಮಕೂರುಸತ್ಯ ವಿಸ್ಮಯ ಪತ್ರಿಕೆ

ಗಂಜಲಗುಂಟೆ ಗ್ರಾ.ಪಂ ನ ಹಿಂದಿನ ಪಿಡಿಓ ರವಿಚಂದ್ರ ಅವಧಿಯಲ್ಲಿ ಬಹಳಷ್ಟು ಬ್ರಷ್ಟಾಚಾರ ನಡೆದಿದ್ದು ಇದರ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಗಂಜಲಗುಂಟೆ ಗ್ರಾ.ಪಂ ಅಧ್ಯಕ್ಷೆ ಸಾವಿತ್ರಮ್ಮ ಡಿ.ಹೆಚ್. ನಾಗರಾಜು ತಿಳಿಸಿದರು.

ಮಧುಗಿರಿ :ತಾಲೂಕಿನ ಗಂಜಲಗುಂಟೆ ಗ್ರಾ.ಪಂ ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದಿನ ಪಿಡಿಓ ರವರ ಅವಧಿಯಲ್ಲಿನ ಭ್ರಷ್ಟಾಚಾರದ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿಗಳಿಗೆ ದೂರು ನೀಡಿದ್ದರಿಂದ ಪಿಡಿಓ ನಮ್ಮ ವಿರುದ್ದ ಸೇಡು ತೀರಿಸಿಕೊಳ್ಳುವ ಹೊರಟಿದ್ದು, ನನ್ನ ಮೇಲೆ ಕೆಲವು ಗ್ರಾ. ಪಂ ಸದಸ್ಯರನ್ನು ಎತ್ತಿಕಟ್ಟಿ ರಾಜಕೀಯ ನಡೆಸಿ ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಯತ್ನಿಸಿ ನನ್ನ ತೇಜೋವಧೆಗೆ ಪ್ರಯತ್ನಿಸಿದ್ದು, ನಾನು ಅಧ್ಯಕ್ಷೆಯಾದ ಮೇಲೆ ಗ್ರಾ.ಪಂ ನೌಕರರ 18 ತಿಂಗಳ ವೇತನ ಪಾವತಿ ಮಾಡಿದ್ದೇನೆ. ಸುಳ್ಳು ಆರೋಪಗಳನ್ನು ಮಾಡಿ ನನ್ನನ್ನು ತೇಜವಧೆ ಮಾಡಲು ಪ್ರಯತ್ನಿಸುತ್ತಿದ್ದು, ನನ್ನ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದರು.

ಗ್ರಾ.ಪಂ ಸದಸ್ಯ ವೀರೇಶ್ ಮಾತನಾಡಿ ನಾನು ಇಂಜಿನಿಯರಿಂಗ್ ಪದವಿಧರನಾಗಿದ್ದು, ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ ಗ್ರಾ.ಪಂ ಸದಸ್ಯನಾಗಿ ಆಯ್ಕೆಯಾಗಿದ್ದು, ಆದರೆ ನಾವು ನಿರೀಕ್ಷಿಸಿದ ಮಟ್ಟದಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ 2017-20 ರ ಅವಧಿಯಲ್ಲಿದ್ದ ಪಿಡಿಓ ರವಿಚಂದ್ರರವರೇ ಕಾರಣ. ಅವರ ಅವಧಿಯಲ್ಲಿ ಗೋಕಟ್ಟೆ ಗೆ ಎರಡು ಬಿಲ್ ಮಾಡಿದ್ದಾರೆ. ಇ-ಸ್ವತ್ತು ಮಾಡಿಕೊಡಲು ಲಂಚ ಪಡೆಯುತ್ತಿದ್ದರು ಎಂದು ಗ್ರಾಮಸ್ಥರೇ ಆರೋಪಿಸಿದ್ದು, ಕಾಮಗಾರಿ ನಡೆಸದೇ ಬಿಲ್ ಮಾಡಿರುವ ಉದಾಹರಣೆಗಳು ಬಹಳಷ್ಟಿವೆ.

ಇವರ ಅವ್ಯವಹಾರಗಳ ಜೊತೆಗೆ ಕಂಪ್ಯೂಟರ್ ಆಪರೇಟರ್ ಲೋಕೇಶ್ ಸಹ ಕೈ ಜೋಡಿಸಿದ್ದು, ಇವರ ವಿರುದ್ದ ಜಿ.ಪಂ ಸಿಇಓ ರವರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದ್ದರಿಂದ ಸೆ. 28 ರಂದು ಮಧುಗಿರಿ ಗೆ ಭೇಟಿ ನೀಡಲಿರುವ ಲೋಕಾಯುಕ್ತ ಅಧಿಕಾರಿಗಳಿಗೆ ಪಿಡಿಓ ವಿರುದ್ದ ದೂರು ಸಲ್ಲಿಸಿ ಸೂಕ್ತ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಮನವಿ ಮಾಡಲಾಗುವುದು ಎಂದರು. ಗ್ರಾ.ಪಂ ಉಪಾಧ್ಯಕ್ಷೆ ಚೇತನ ಶಿವಕುಮಾರ್, ಸದಸ್ಯರಾದ ದಾಸೇಗೌಡ, ಮಹೇಶ್, ನಂದಿನಿ ರಘುನಾಥ್, ಶ್ರೀಮತಿ ಸಿ ಮಾಲಾ, ನಾಗಭೂಷಣ, ರಂಗರಾಜು ಇತರರಿದ್ದರು.

ವರದಿ :ರಾಘವೇಂದ್ರ ಎಂ ಎಸ್ ಮಧುಗಿರಿ

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5279

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5279

Notice: ob_end_flush(): failed to send buffer of zlib output compression (1) in /home2/sathyavi/public_html/wp-content/plugins/really-simple-ssl/class-mixed-content-fixer.php on line 107