ತುಮಕೂರುಸತ್ಯ ವಿಸ್ಮಯ ಪತ್ರಿಕೆ

ಕಲಿಕಾ ಸಾಮಗ್ರಿಗಳ ವಿತರಣೆ

ಪಾವಗಡ: ಭಾರತ ಮಾತಾ ಸೇವಾ ಟ್ರಸ್ಟ್ ವತಿಯಿಂದ ಪಟ್ಟಣದ ಶನಿಮಹಾತ್ಮ ದೇವಸ್ಥಾನ ಹಿಂಭಾಗ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿಗಳನ್ನು ವಿತರಣೆ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಂಡಿದ್ದರು.ಟ್ರಸ್ಟ್ ಉಪಾಧ್ಯಕ್ಷರಾದ ಹನುಮಂತನಹಳ್ಳಿ ದೀವಕರ್ ರವರು ಮಾತನಾಡಿ, ನನ್ನ ಸಹೋದರ ಪ್ರತಾಪ್ ರವರು ಹಲವಾರು ವರ್ಷಗಳಿಂದ ಸ್ವಂತ ಹಣದಿಂದ ನಿಸ್ವಾರ್ಥದಿಂದ ಸಮಾಜ ಸೇವೆ ಮಾಡುತ್ತಿದಾರೆ, ಅವರ ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬ ಸಿದ್ದಾಂತ ದಲ್ಲಿ ನಂಬಿಕೆ ಇಟ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಶಾಲೆಯ ಮುಖ್ಯಶಿಕ್ಷಕರಾದ ಮಾರುತೀಶ್ ರವರು ಮಾತನಾಡಿ, ಟ್ರಸ್ಟಿನ ಅಧ್ಯಕ್ಷರಾದ ನಾಗೇಂದ್ರ ಪ್ರತಾಪ್ ರವರು ಚಿಕ್ಕ ವಯಸ್ಸಿನಲ್ಲೆ ಸಾಮಾಜಿಕ ಜವಬ್ದಾರಿ ವಹಿಸಿ ಸಮಾಜಸೇವೆ ಮಾಡುತ್ತಿರುವುದು ತುಂಭ ಶ್ಲಾಘನೀಯ ಮತ್ತು ಇವರಿಗೆ ಇನ್ನೊ ಹೆಚ್ಚಿನ ಸಹಾಯ ಮಾಡುವ ಶಕ್ತಿ ತಾಯಿ ಭಾರತಾಂಭೇ ಕರುಣಿಸಲಿ ಎಂದರು ವರದಿಗಾರರಾದ ನಂದೀಶನಾಯ್ಕ,ರುದ್ರಯ್ಯ ರವರಿಗೆ ಸನ್ಮಾನಿಸಲಾಯಿತು.ಈ ಸಂಧರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ನಾಗೇಂದ್ರ ಪ್ರತಾಪ್, ಉಪಾಧ್ಯಕ್ಷರಾದ ದೀವಕರ್, ವರದಿಗಾರರಾದ ಸೂರ್ಯಪ್ರಕಾಶ್, ಮುಖ್ಯಶಿಕ್ಷಕರಾದ ಮಾರುತೀಶ್, ಶಿಕ್ಷಕರಾದ ಗಂಗಧರ, ಹಿರಿಯ ಮುಖಂಢರಾದ ಹನುಮಂತನಹಳ್ಳಿ ಹನುಮಂತರೆಡ್ಡಿ, ಸಾಸಲಕುಂಟೆ ವಾಜೀದ್ ಇತರರು ಉಪಸ್ಥಿತರಿದ್ದರು.

ವರದಿ: ಸತೀಶ್ ವೈ ಎನ್ ಹೊಸಕೋಟೆ

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5279

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5279

Notice: ob_end_flush(): failed to send buffer of zlib output compression (1) in /home2/sathyavi/public_html/wp-content/plugins/really-simple-ssl/class-mixed-content-fixer.php on line 107