ತುಮಕೂರುಸತ್ಯ ವಿಸ್ಮಯ ಪತ್ರಿಕೆ

ಆದಿಜಾಂಬವ ಸಮುದಾಯ ಅಭಿವೃದ್ಧಿಯಾಗಲು ಸಹಕಾರಿ ತತ್ವ ಅಳವಡಿಕೊಳ್ಳಲು ಡಾ//ಶ್ರೀಧರ್ ಕರೆ.

ತಿಪಟೂರು: ಆದಿಜಾಂಬವ ಸಮುದಾಯ ಕೀಳಿರಿಮೆ ಬಿಟ್ಟು ಎಲ್ಲರೂ ಒಬ್ಬರಿಗಾಗಿ ಒಬ್ಬರೂ ಎಲ್ಲರಿಗಾಗಿ ಎನ್ನುವ ಸಹಕಾರಿ ತತ್ವ ಮೈಗೂಡಿಸಿಕೊಂಡು ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಖ್ಯಾತ ವೈದ್ಯರಾದ ಡಾ//ಶ್ರೀಧರ್ ತಿಳಿಸಿದರು ನಗರದ ಶಿಕ್ಷಕರ ಭವನದಲ್ಲಿ ಆದಿಜಾಂಬವ ಪರಿಶಿಷ್ಟಜಾತಿ ವಿವಿದೋದೇಶ ಸಹಕಾರ ಸಂಘದ 8ನೇ ವರ್ಷದ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರವನ್ನ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಅವರು ಸಮುದಾಯ ಅಭಿವೃದ್ದಿ ಹೊಂದಬೇಕಾದರೆ ಎಲ್ಲರೂ ಒಬ್ಬರಿಗಾಗಿ ಒಬ್ಬರೂ ಎಲ್ಲರಿಗಾಗಿ ಎನುವ ತತ್ವದಡಿಯಲ್ಲಿ ಕೆಲಸ ಮಾಡಬೇಕು. ಸಮಾಜದಲ್ಲಿ ಉತ್ತಮ ಗೌರವ ಸಂಪಾದಿಸ ಬೇಕಾದರೇ ಆರ್ಥಿಕವಾಗಿ ಸಧೃಡರಾಗ ಬೇಕು ಸಮಾಜ ಸಾಧಕರು ಹಾಗೂ ಅಭಿವೃದ್ಧಿ ಹೊಂದಿದ್ದ ವ್ಯಕ್ತಿಗಳು ಮಾತ್ರ ಗುರ್ತಿಸುತ್ತದೆ

ಈ ನಿಟ್ಟಿಲ್ಲಿ ಸಮುದಾಯದ ನ್ಯೂನತೆಗಳ ಬದಿಗೊತ್ತಿ ಅಭಿವೃದ್ದಿಯ ಪಥದೆಡೆಗೆ ಸಾಗಬೇಕು ನಾನು ಸಾಧಿಸಿದಾಗ ಮಾತ್ರ ಸಮಾಜ ಗುರ್ತಿಸುತ್ತದೆ ಸಮಾಜದಲ್ಲಿ ಸವಲತ್ತು ಪಡೆದು ಮುಂದೆ ಬಂದವರು ಸಮಾಜವನ್ನ ನಿರ್ಲಕ್ಷ ಮಾಡದೆ ಉಳ್ಳವರು ಆರ್ಥಿಕವಾಗಿ ಸಧೃಡರಾದ ವ್ಯಕ್ತಿಗಳು ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಕೆಲಸಮಾಡಬೇಕು. ಆದಿಜಾಂಬವ ಸಮುದಾಯದಲ್ಲಿ ಆರ್ಥಿಕವಾಗಿ ಉತ್ತಮಸ್ಥಿತಿವಂತರು ಸಹಕಾರ ಸಂಘದಲ್ಲಿ ಠೇವಣಿ ಇಡುವ ಮೂಲಕ ಸಂಘ ಹಾಗೂ ಸಮುದಾಯದ ಬೆಳವಣಿಗೆಗೆ ಕೈಜೋಡಿಸಬೇಕು ನಿಮ್ಮ ಸಮಾಜ ಆರ್ಥಿಕವಾಗಿ ಸ್ಥಿತಿವಂತರಾಗಿ ಮುಖ್ಯವಾಹಿನಿಯಲ್ಲಿ ಬದುಕಿದಾಗ ಎಲ್ಲರೂ ಗುರ್ತಿಸಿ ಗೌರವಿಸುತ್ತಾರೆ ನೀವು ನಮ್ಮ ಕೈಯಲ್ಲಿ ಆಗುವುದಿಲ್ಲ ಎನ್ನುವ ಕೀಳಿರಿಮೆಯೊಂದಿಗೆ ಹಿಂದೆಸರಿದರೆ ಯಾರು ಗುರ್ತಿಸುವುದಿಲ್ಲ ನಿಮ್ಮ ಭವಿಷ್ಯವನ್ನ ನೀವೇ ರೂಪಿಸಿಕೊಳ್ಳಬೇಕು.

ಎಂದು ತಿಳಿಸಿದರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೆಇಬಿ ನರಸಿಂಹಮೂರ್ತಿ ಮಾತಮಾಡಿ ಆದಿಜಾಂಬವ ಸಮುದಾಯ ಸಾಂಸ್ಕೃತಿಕವಾಗಿ ಮುಂದುವರೆದ ಸಮುದಾಯವಾಗಿದೆ ನಮ್ಮ ಸಮುದಾಯಕ್ಕೆ ಮುಂದುವರೆದ ಜಾತಿಯ ಸಹಕಾರ ಸಂಘಗಳು ಶೇರುಗಳನ್ನ ನೀಡಲು ಸಹ ಹಿಂಜರಿಯುತ್ತಿದ್ದರೂ ನಮ್ಮ ಮಾದಿಗ ಸಮುದಾಯಕ್ಕೆ ಸಹಕಾರ ಸಂಘ ಮಾಡಿ ಸಮುದಾಯದ ಅಭಿವೃದ್ದಿಗೆ ಪೂರಕವಾಗಿ ಕೆಲಸ ಮಾಡುವ ಉದೇಶದಿಂದ ಆದಿಜಾಂಬವ ಸಹಕಾರ ಸಂಘ ಆರಂಭಿಸಿದ್ದು ಮುಂದಿನದಿನಗಳಲ್ಲಿ ಸಮುದಾಯದ ಅಭಿವೃದ್ಧಿಹೊಂದಲು ಐಎಎಸ್.ಐಪಿಎಸ್.ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ಸೆಂಟರ್ ತೆರೆಯುವ ಕೆಲಸ ಮಾಡುವ ಯೋಜನೆ ರೂಪಿಸುತ್ತಿದ್ದು ತಾಲ್ಲೋಕಿನ ಮಾದಿಗ ಸಮುದಾಯದ ಬಂದುಗಳು ಸಹಕಾರ ಸಂಘದಲ್ಲಿ ಶೇರು ಹೊಂದುವ ಜೊತೆಗೆ ಸಂಘದಲ್ಲಿ ಠೇವಣಿ ಇಡುವ ಮೂಲಕ ಸಮುದಾಯದ ಅಭಿವೃದ್ಧಿ ಸಹಕರಿಸ ಬೇಕು ಎಂದು ತಿಳಿಸಿದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹದೇವಯ್ಯ ಮಾತನಾಡಿ ಮಾದಿಗ ಸಮುದಾಯದ ಹಿರಿಯರು ಹಾಗೂ ಕಿರಿಯರ ಸಹಕಾರದಿಂದ ಸಂಘ ಉತ್ತಮದಾರಿಯಲ್ಲಿ ನಡೆಯುತ್ತಿದೆ

ನಮ್ಮ ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲು ಸಹಕಾರಿ ಸಂಘವನ್ನ ಆರ್ಥಿಕವಾಗಿ ಸಧೃಡಗೊಳಿಸಬೇಕಿದ್ದು ಸಮುದಾಯದಲ್ಲಿ ಆರ್ಥಿಕವಾಗಿ ಸಧೃಡರಾದವರು ತಮ್ಮ ಸಹಕಾರ ಸಂಘದಲ್ಲಿ ಠೇವಣಿ ಇಡುವ ಜೊತೆಗೆ ನಗರ ಹಾಗೂ ಗ್ರಾಮೀಣ ಭಾಗದ ಜನ ಹೆಚ್ಚು ಹೆಚ್ಚು ಶೇರು ಪಡೆಯಬೇಕು.

ನಮ್ಮ ಕಷ್ಟಕಾಲದಲ್ಲಿ ಸಂಘದ ನೆರವು ಪಡೆಯುವ ಜೊತೆಗೆ ಸಂಘದ ಅಭಿವೃದ್ಧಿಗೆ ನೆರವಾಗ ಬೇಕು ಎಂದು ತಿಳಿಸಿದರುಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳು ಹಾಗೂ ಸಮುದಾಯದ ಸಾಧಕರನ್ನ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಕೆ.ಟಿ ಪಟ್ಟಾಭಿರಾಮ್.ಕೆಇಬಿ ನರಸಿಂಹಮೂರ್ತಿ .ಆರ್ ಗೋವಿಂದಯ್ಯ.ಮೈಲಾರಪ್ಪ.ರಾಜಶೇಖರ್ ಕಾರ್ಯದರ್ಶಿ ರೋಹಿತ್.ಹರ್ಷ.ಶಂಕರಪ್ಪ.ಕೆ.ರಾಮಯ್ಯ.ಕೆ.ಎಂ ಶಾಂತಪ್ಪ ಮುಂತ್ತಾದವರು ಉಪಸ್ಥಿತರಿದರು.

ವರದಿ:ಸ್ವಾಮಿ ತಿಮ್ಮಲಾಪುರ

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5279

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5279

Notice: ob_end_flush(): failed to send buffer of zlib output compression (1) in /home2/sathyavi/public_html/wp-content/plugins/really-simple-ssl/class-mixed-content-fixer.php on line 107