ಸತ್ಯ ವಿಸ್ಮಯ ಪತ್ರಿಕೆಹಾಸನ್

ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ದಿನೇಶ್ ಅವರು ತಮ್ಮ ಗೌರೋಧನದ ಹಣವನ್ನು ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ 14 ಜನರಿಗೆ ಹೊಸ ಬಟ್ಟೆಯನ್ನು ನೀಡುವ ಮೂಲಕ ಮಾಧುರಿ ಕೆಲಸಕ್ಕೆ ಚಾಲನೆ ನೀಡಿದ್ದಾರೆ

ಚನ್ನರಾಯಪಟ್ಟಣ ತಾಲೂಕಿನ ಕಸಬಾ ಹೋಬಳಿಯ ನಲ್ಲೂರು ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ದಿನೇಶ್ ಅವರು ತಮ್ಮ ಗೌರವಧನದ ಹಣವನ್ನು ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುವ 14 ಜನ ಸಿಬ್ಬಂದಿಗಳಿಗೆ ಹೊಸ ಬಟ್ಟೆಗಳ ನೀಡುವ ಮುಖಾಂತರ ಮಾದರಿ ಕೆಲಸಕ್ಕೆ ಚಾಲನೆ ನೀಡಿದರು, ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಿ.ಎನ್ ಪುಟ್ಟಸ್ವಾಮಿಗೌಡ ಮಾತನಾಡಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ದಿನೇಶ್ ಅವರು ತಮ್ಮ ಉಪಾಧ್ಯಕ್ಷ ಸ್ಥಾನದ ಗೌರವದನದ ಸಂಬಳದಲ್ಲಿ ಗ್ರಾಮ ಪಂಚಾಯತಿಯ ಎಲ್ಲಾ ಸಿಬ್ಬಂದಿಗಳಿಗೆ ಹೊಸ ಬಟ್ಟೆಗಳನ್ನು ನೀಡುವ ಮುಖಾಂತರ ಮಾದರಿ ಕೆಲಸವನ್ನು ಮಾಡಿರುವುದು ತುಂಬಾ ಶ್ಲಾಘನೀಯ ಎಂದರು,

ಮಹಾತ್ಮ ಗಾಂಧಿಯವರ ಸ್ವಚ್ಛ ಭಾರತದ ಕನಸಿನ ಯೋಜನೆಯ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಜಾರಿ ಮಾಡಿರುವ ಸ್ವಚ್ಛ ಭಾರತ ಆಂದೋಲನವನ್ನು ಪ್ರತಿಯೊಬ್ಬ ನಾಗರಿಕರು ಪಾಲಿಸಿಕೊಂಡು ತಮ್ಮ ಮನೆಯ ಅಕ್ಕಪಕ್ಕ ಸ್ವಚ್ಛತೆಯನ್ನು ಮಾಡುವ ಮುಖಾಂತರ ಅತ್ಯುತ್ತಮ ಪರಿಸರವನ್ನು ಸೃಷ್ಟಿ ಮಾಡಿಕೊಳ್ಳಬೇಕು, ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಶೇಖರಣೆ ಮಾಡಿ ಗ್ರಾಮಪಂಚಾಯತಿಯಿಂದ ಬರುವ ಕಸದ ವಾಹನಕ್ಕೆ ತಲುಪಿಸಬೇಕು ಎಂದರು, ಪ್ರತಿಯೊಬ್ಬ ನಾಗರಿಕರು ಪರಿಸರವನ್ನು ಕಾಪಾಡಬೇಕು ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಡಲು ಗಮನಹರಿಸಬೇಕು,ಸ್ವಚ್ಛತೆಗೆ ಮೊದಲ ಆದ್ಯತೆಯನ್ನು ನೀಡಬೇಕು ಎಂದರು,

ಇದೇ ಸಂದರ್ಭದಲ್ಲಿ ಸಹಕಾರ ಮಾರಾಟ ಮಹಾಮಂಡಲದ ನಿರ್ದೇಶಕರಾದ ಸಿ.ಎನ್ ಪುಟ್ಟಸ್ವಾಮಿಗೌಡ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶೋಭಾ, ಉಪಾಧ್ಯಕ್ಷರಾದ ನಲ್ಲೂರುನಾಗೇಶ್, ಗ್ರಾಮ ಪಂಚಾಯತಿ ಸದಸ್ಯ ದಿವಾಕರ್, ಚಿಕ್ಕಗನ್ನಿಪ್ರಕಾಶ್ ದಿವಾಕರ್,ಸಂತೋಷ್, ರಾಜೇಶ್, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಪ್ರಕಾಶ್, ಸತೀಶ್ ಚಿಕ್ಕಗನ್ನಿ,ಪಿಡಿಒ ನಾಗೇಶ್, ಸೇರಿದಂತೆ ಇತರರು ಹಾಜರಿದ್ದರು.

ವರದಿ:ಸ್ವಾಮಿ ತಿಮ್ಮಲಾಪುರ

Related Articles

Leave a Reply

Your email address will not be published.

Back to top button

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5275

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5275

Notice: ob_end_flush(): failed to send buffer of zlib output compression (1) in /home2/sathyavi/public_html/wp-content/plugins/really-simple-ssl/class-mixed-content-fixer.php on line 110