ಚಿಕ್ಕಬಳ್ಳಾಪುರಸತ್ಯ ವಿಸ್ಮಯ ಪತ್ರಿಕೆ

ಗ್ರಾಮೀಣ ಭಾಗದ ಬಡವರ ಪರವಾಗಿ ಕೆಲಸ ಮಾಡಿ :- ನ್ಯಾಯಾಧೀಶ ರಂಗಸ್ವಾಮಿ ಜೆ

ಬಾಗೇಪಲ್ಲಿ :- ಪರಗೋಡು ಗ್ರಾಮ ಪಂಚಾಯಿತಿಯಲ್ಲಿ ಗ್ರಾಮೀಣ ಕಾನೂನು ಕಾಳಜಿ ಮತ್ತು ಬೆಂಬಲ ಕೇಂದ್ರ ವನ್ನು ಉದ್ಘಾಟಿಸಿ ಮಾತನಾಡಿದರು .ಗ್ರಾಮೀಣ ಭಾಗದಲ್ಲಿ ಅನೇಕ ಬಡವರು ಸರ್ಕಾರಿ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಅಂತಹ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ,ಕಾರ್ಯದರ್ಶಿ ,ಬಿಲ್ ಕಲೆಕ್ಟರ್ ಅಧಿಕಾರಿಗಳು ಯಾವುದೇ ರೀತಿಯ ಹಣವನ್ನು ಪಡೆದ ರೀತಿಯಲ್ಲಿ ಉಚಿತವಾಗಿ ಸೇವೆಯನ್ನು ಒದಗಿಸಬೇಕು ಇಲ್ಲವಾದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದರು.

ಗ್ರಾಮ ಪಂಚಾಯಿತಿಗೆ ರೈತರು, ಬಡವರು, ದೀನದಲಿತರು, ಮಹಿಳೆಯರು ಬರುವಂತದ್ದು ಅಂತಹ ಸಂದರ್ಭದಲ್ಲಿ ಅಧಿಕಾರಿಗಳು ಗೆ ಉತ್ತಮ ರೀತಿಯಲ್ಲಿ ಸ್ಪಂದಿಸಬೇಕು ಅವರ ಕೆಲಸವನ್ನ ಕಾಳಜಿವಹಿಸಿನಿರ್ವಹಿಸಬೇಕು ಸರ್ಕಾರದಿಂದ ಬರುವ ಎಲ್ಲ ರೀತಿಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಸೌಲಭ್ಯಗಳನ್ನು ಒದಗಿಸಬೇಕು ಎಂದು ತಿಳಿಸಿದರು

ಒತ್ತಾಯಪೂರ್ವಕವಾಗಿ ಹಣವನ್ನು ವಸೂಲಿ ಮಾಡುವ ಅಧಿಕಾರಿಗಳು ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ತಿಳಿಸಿದರು. ( Where there is a demand , where there is a remand ) ಅಧಿಕಾರಿಗಳು ನೀವು ಮನಗಾನಬೇಕು ಇಲ್ಲವಾದಲ್ಲಿ ನಿಮಗೆ ಶಿಕ್ಷೆ ತಪ್ಪಿದ್ದಲ್ಲ ನೀವು ನೆನೆಯಬೇಕಾಗಿದೆ ಎಂದರು

ಇದೊಂದು ಗ್ರಾಮೀಣ ಭಾಗದ ಕಾನೂನು ಕಾಳಜಿ ಕೇಂದ್ರವನ್ನು ಇಂದು ಗ್ರಾಮ ಪಂಚಾಯ್ತಿಯಲ್ಲಿ ಉದ್ಘಾಟನೆ ಮಾಡಿದ್ದೇವೆ ಇದರ ಸದುಪಯೋಗವನ್ನು ಈ ಭಾಗದ ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಬಾಗೇಪಲ್ಲಿ ಉಚಿತ ಕಾನೂನು ಸೇವಾ ಸಮಿತಿಯಿಂದ ಸಿಗುವಂತಹ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು . ಈ ಸಂದರ್ಭದಲ್ಲಿ ಕಾನೂನು ಕಾಳಜಿ ಮತ್ತು ಬೆಂಬಲ ಕೇಂದ್ರಕ್ಕೆ ಮಹೇಶ್ ವಕೀಲ ರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಕಾರ್ಯದರ್ಶಿ ವೆಂಕಟೇಶ್ ಹಿರಿಯ ವಕೀಲರಾದ ನರಸಿಂಹರೆಡ್ಡಿ ,ಆರ್ ಚಂದ್ರಶೇಖರ್ ,ಪ್ಯಾನಲ್ ವಕೀಲರಾದ ಬಿಂದು ಕುಮಾರಿ, ಮಲ್ಲಿಕಾರ್ಜುನ ನಾಗಭೂಷಣ ಎನ್, ಮಹೇಶ್, ವೆಂಕಟರಮಣ , ಪೋಲಿಸ್ ಬಾಬವಳಿ, ಕಾನೂನು ಸೇವಾ ಸಮಿತಿಯ ಸಿಬ್ಬಂದಿಯವರಾದ ಗಂಗುಲಪ್ಪ ಧನಂಜಯ ಇತರ ಸಿಬ್ಬಂದಿಯವರು . ಪರಗೋಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿ ಇತರ ಸಿಬ್ಬಂದಿ ಹಾಜರಿದ್ದರು

ವರದಿ:ಸುಧಾಕರ ಹೆಚ್ ಪಿ ಬಾಗೇಪಲ್ಲಿ

Related Articles

Leave a Reply

Your email address will not be published.

Back to top button

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5275

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5275

Notice: ob_end_flush(): failed to send buffer of zlib output compression (1) in /home2/sathyavi/public_html/wp-content/plugins/really-simple-ssl/class-mixed-content-fixer.php on line 110