ಸತ್ಯ ವಿಸ್ಮಯ

ಗ್ರಾಮ ನೈರ್ಮಲ್ಯ ನಿರಂತರ ನಡೆಯುವ ಚಟುವಟಿಕೆ : ಸ್ವಚ್ಚ ಭಾರತ ಮಿಷನ್ ಜಿಲ್ಲಾ ಸಂಯೋಜಕ ರವಿಕುಮಾರ್.

ಗುಬ್ಬಿ: ಶೌಚಾಲಯ ನಿರ್ಮಾಣ ಆದಲ್ಲಿ ಸ್ವಚ್ಚತೆ ಎಂಬ ಭಾವನೆ ಬಿಟ್ಟು ಸ್ವಚ್ಛತೆಯ ನಿರಂತರ ನಿರ್ವಹಣೆ ಅತಿ ಮುಖ್ಯ ಎನ್ನುವ ಬಗ್ಗೆ ಸಮುದಾಯಕ್ಕೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಸ್ವಚ್ಛ ಭಾರತ್ ಮಿಷನ್ ಯೋಜನೆಯ ಜಿಲ್ಲಾ ಸಂಯೋಜಕ ರವಿಕುಮಾರ್ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ನೈರ್ಮಲ್ಯ ಕುರಿತ ತಾಲ್ಲೂಕು ಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದ ಅವರು ಗಾಂಧೀಜಿ ಅವರ ಕನಸಾದ ಗ್ರಾಮ ಸ್ವರಾಜ್ಯ ಪರಿಕಲ್ಪನೆ ಸಾಕಾರಗೊಳಿಸಲು ಜನ ಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳ ಜೊತೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದರು.ಒಮ್ಮೆ ಮಾತ್ರ ಅರಿವು ಮೂಡಿಸುವ ಕೆಲಸ ಮಾಡುವ ಬದಲು ನಿರಂತರವಾದ ಸ್ವಚ್ಚತೆ ಮತ್ತು ನಿರ್ವಹಣೆ ಬಗ್ಗೆ ತಿಳುವಳಿಕೆ ಮೂಡಿಸುವ ಉದ್ದೇಶ ಸ್ವಚ್ಚ ಭಾರತ ಮಿಷನ್ ಹೊಂದಿದೆ.

ಶೌಚಾಲಯ ಜೊತೆ ಬಚ್ಚಲು ಇಂಗು ಗುಂಡಿ, ಬಾಕ್ಸ್ ಚರಂಡಿ, ಕಸ ವಿಲೇವಾರಿ, ನಿತ್ಯ ಸ್ವಚ್ಚತೆ ಹೀಗೆ ಅನೇಕ ಕಾರ್ಯಕ್ರಮ ಇಲ್ಲಿದೆ ಎಂದ ಅವರು ಗಾಂಧೀಜಿ ಅವರ ಕನಸು ಗ್ರಾಮ ಸ್ವರಾಜ್ಯ ಕಲ್ಪನೆ ಸಾಕಾರಕ್ಕೆ ಈ ಹಿಂದೆ 1951 ರಲ್ಲಿ ಪಂಚ ವಾರ್ಷಿಕ ಯೋಜನೆ ಮೂಲಕ ಪ್ರಯತ್ನಿಸಿ 1985 ರಲ್ಲಿ ಶೌಚಾಲಯ ನಿರ್ಮಾಣದ ಮೂಲಕ ಪರಿಣಾಮಕಾರಿ ಹಂತ ತಲುಪಿತು.

ಈಚೆಗೆ ದಶಕದಲ್ಲಿ ಸಾಕಷ್ಟು ಕಾರ್ಯಕ್ರಮ ನಡೆಸಿ ಜನರಿಗೆ ಹತ್ತಿರವಾಗಿದ್ದೇವೆ ಎಂದರು.ತಾಪಂ ಇಓ ಶಿವಪ್ರಕಾಶ್ ಮಾತನಾಡಿ ಸಾರ್ವಜನಿಕರ ಆರೋಗ್ಯ ಕಾಪಾಡುವುದು ಈ ಸ್ವಚ್ಚ ಭಾರತ ಮಿಷನ್ ಯೋಜನೆಯದ್ದಾಗಿದೆ.

ತಾಲ್ಲೂಕಿನ 34 ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಅಧ್ಯಕ್ಷರು, ಪಿಡಿಒಗಳು, ಡಾಟಾ ಎಂಟ್ರಿ ಆಪರೇಟರ್ ಗಳಿಗೆ ತರಬೇತಿ ಕಾರ್ಯಾಗಾರ ನಡೆಸಿ ನೈರ್ಮಲ್ಯ ಕುರಿತು ಪರಿಣಾಮಕಾರಿ ಅನುಷ್ಟಾನಕ್ಕೆ ಅಗತ್ಯ ಕ್ರಮದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದರು.

ಪ್ರತಿ ಮನೆಯ ಪರಿಸರ ಅವಲೋಕಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲು ಸೂಕ್ತ ತರಬೇತಿ ನೀಡಲಾಗುತ್ತಿದೆ. ಈ ಬಗ್ಗೆ ತಾಂತ್ರಿಕ ತಿಳುವಳಿಕೆಗೆ ಪ್ರಾಯೋಗಿಕ ತರಬೇತಿಯನ್ನು ಜಿ.ಹೊಸಹಳ್ಳಿ ಗ್ರಾಮ ಪಂಚಾಯತಿಯಲ್ಲಿ ನಡೆಸಲಾಗುತ್ತದೆ. ಎಲ್ಲಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದರ ಉಪಯೋಗ ಪಡೆದುಕೊಳ್ಳುತ್ತಾರೆ ಎಂದರು.ಕಾರ್ಯಾಗಾರದಲ್ಲಿ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಇಂದ್ರೇಶ್, ಜೆಜೇಎಂಐಎಸ್ ಎ ತಂಡದವರು ಸೇರಿದಂತೆ ಎಲ್ಲಾ ಪಿಡಿಒಗಳು, ಎಲ್ಲಾ ಗ್ರಾಪಂ ಅಧ್ಯಕ್ಷರು ಹಾಜರಿದ್ದರು.

ವರದಿ: ರಾಘವೇಂದ್ರ ಗುಬ್ಬಿ

Related Articles

Leave a Reply

Your email address will not be published.

Back to top button

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5275

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5275

Notice: ob_end_flush(): failed to send buffer of zlib output compression (1) in /home2/sathyavi/public_html/wp-content/plugins/really-simple-ssl/class-mixed-content-fixer.php on line 110