ಸತ್ಯ ವಿಸ್ಮಯ

ಗಣೇಶೋತ್ಸವ ಆಚರಣೆಗೆ ಗಣೇಶ ಮೂರ್ತಿಯ ಕೊಡುಗೆ

ವಿಜಯಪುರ: ಕಳೆದ ಎರಡು ವರ್ಷಗಳು ಕೊರೊನಾ ಕಾರಣದಿಂದ ಎಲ್ಲೂ ಗಣಪತಿ ಉತ್ಸವವನ್ನು ಎಂದಿನಂತೆ ನಡೆಸಲು ಸಾಧ್ಯವಾಗಲಿಲ್ಲ. ಜನರು ಭಯಭೀತರಾಗಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಣೇಶೋತ್ಸವಕ್ಕೆ ಅನುಮತಿ ನೀಡಲಿಲ್ಲ. ಈ ವರ್ಷ ಎಲ್ಲ ಸಂಕಷ್ಟಗಳಿಂದ ಮುಕ್ತರಾಗಿ ಗಣೇಶ ಹಬ್ಬ ಆಚರಿಸುತ್ತಿದ್ದೇವೆ ಎಂದು ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಂ. ಆನಂದ್ ಕುಮಾರ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದ ಹಿಂಭಾಗದ ಅಶೋಕ ನಗರದಲ್ಲಿ ಪಟ್ಟಣದ ಯುವಕ ಮಂಡಳಿಗಳಿಗೆ 5 ಅಡಿ ಗಣೇಶ ಮೂರ್ತಿಗಳನ್ನು ವಿಜಯಪುರ ಪುರಸಭಾ ಮಾಜಿ ಸದಸ್ಯ ರಾಮಚಂದ್ರಪ್ಪನವರ ಸ್ವಗೃಹದಲ್ಲಿ ವಿತರಣೆ ಮಾಡಿಮಾತನಾಡಿ, ತೂಬುಗೆರೆ ಹೋಬಳಿಯಾದ್ಯಂತ ಸುಮಾರು 72 ಗಣೇಶ ಮೂರ್ತಿಗಳು ಹಾಗೂ ವಿಜಯಪುರದಲ್ಲಿ 50 ಗಣೇಶ ಮೂರ್ತಿಗಳನ್ನು ಕೊಡುಗೆಯಾಗಿ ನೀಡಿದ್ದೇನೆ. ದೇವನಹಳ್ಳಿ ಕ್ಷೇತ್ರದಲ್ಲಿ ಗಣೇಶೋತ್ಸವ ಮಾಡಲು ಸಹಾಯ ಕೋರಿದ ಎಲ್ಲರಿಗೂ ಗಣೇಶ ಮೂರ್ತಿ ಕೊಡಿಸುವ ಜೊತೆಗೆ ಕೈಲಾದ ಸಹಾಯ ಮಾಡಿದ್ದು, ಇದರಿಂದ ಮನಸ್ಸಿಗೂ ತೃಪ್ತಿಕರ.

ಹಿಂದು ಮುಸ್ಲಿಂ ಗಲಾಟೆಗೆ ಸಮಯ ಕಾಯುವ ಬಿಜೆಪಿ: ಯಾವುದಾದರೂ ಹಬ್ಬದ ಸಮಯದಲ್ಲಿ ಹಿಂದು ಮುಸ್ಲಿಂ ಮಧ್ಯೆ ಏನಾದರೂ ಮನಸ್ತಾಪ ತರಲು ಬಿಜೆಪಿ ಹುನ್ನಾರ ಹೂಡುತ್ತಾರೆ. ಕೋಮುವಾದ ಸೃಷ್ಟಿಸಲು ಸಾವರ್ಕರ್ ಹೆಸರು ತಂದಿದ್ದಾರೆ. ಆದರೆ ದೇವನಹಳ್ಳಿ ತಾಲ್ಲೂಕಿನಲ್ಲಿ ಈ ತಾರತಮ್ಯ ಮಾಡಲು ಕಾಂಗ್ರೆಸ್ ಅವಕಾಶ ನೀಡದೆ ಸರ್ವೇಜನ ಸುಖಿನೋ ಭವಂತು ಎಂದು ಯಾವುದೇ ವಾರ್ಡ್ ನ ಯಾವುದೇ ಪಕ್ಷದವರು ಬಂದರೂ ಎಲ್ಲರನ್ನು ಸಮಾವಾಗಿ ಕಂಡು ಕಾಂಗ್ರೆಸ್ ಮುಖಂಡರೆಲ್ಲಾ ಒಗ್ಗೂಡಿ ಗಣೇಶೋತ್ಸವ ಆಚರಿಸಲು ಪ್ರೋತ್ಸಾಹ ನೀಡುತ್ತಿರುವುದಾಗಿ ತಿಳಿಸಿದರು.

ಪುರಸಭಾ ಮಾಜಿ ಸದಸ್ಯ ರಾಮಚಂದ್ರಪ್ಪ ಮಾತನಾಡಿ, ಗಣೇಶ ಮೂರ್ತಿ ಗಳನ್ನು ವಿತರಿಸಿವಲ್ಲಿ ಯಾವುದೇ ಜಾತಿ ಭೇದ, ಪಕ್ಷ ನೋಡದೆ ಆನಂದ್ ಕುಮಾರ್ ಬಹಳಷ್ಟು ಜನರಿಗೆ ಗಣೇಶ ಮೂರ್ತಿ ವಿತರಿಸಿದ್ದು, ಈ ಹಿಂದೆ ಹೆಬ್ಬಾಳ ಕ್ಷೇತ್ರದ ಬಿಬಿಎಂಪಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ಈಗ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾಗಿ ಜನಸೇವೆಯಲ್ಲಿ ತೊಡಗಿದ್ದು, ಮುಂಬರುವ ಎಂಎಲ್ ಎ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿ ಮತ್ತಷ್ಟು ಜನ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಗೌರಿ ಗಣೇಶ ಆಶೀರ್ವದಿಸಲಿ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪುರಭಾ ಸದಸ್ಯರಾದ ನಂದಕುಮಾರ್, ರಾಜಣ್ಣ, ನಾರಾಯಣಸ್ವಾಮಿ, ಮಾಜಿ ಸದಸ್ಯ ರಾಮಚಂದ್ರಪ್ಪ, ಮೊಹಮದ್ ಏಜಾಜ್, ದಲಿತ ಮುಖಂಡ ಶಿವಕುಮಾರ್, ತಿಗಳ ಸಮಾಜದ ಮುಖಂಡ ಅರುಣ್ ಮುನಿಕೃಷ್ಣ, ಸುರೇಶ್, ಬಾಲು, ಅಂಬರೀಶ್, ವಾಸೀಂ,ಅನೇಕ ಹಿಂದೂ ಮುಸ್ಲಿಂ ಮುಖಂಡರು ಹಾಜರಿದ್ದರು.

ವರದಿ:ಹರ್ಷ ಪಿ ಸತ್ಯ ವಿಸ್ಮಯ ಪತ್ರಿಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆ

Related Articles

Leave a Reply

Your email address will not be published.

Back to top button

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5275

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5275

Notice: ob_end_flush(): failed to send buffer of zlib output compression (1) in /home2/sathyavi/public_html/wp-content/plugins/really-simple-ssl/class-mixed-content-fixer.php on line 110