ಬೆಂಗಳೂರುಸತ್ಯ ವಿಸ್ಮಯ ಪತ್ರಿಕೆ

ಸೋಮಾನಿ ಬೆಂಗಳೂರಿನಲ್ಲಿ ತನ್ನ ಅತ್ಯದ್ಭುತ ಸಂಗ್ರಹದ ವಿನೂತನ ಆರಂಭದೊಂದಿಗೆ ಕಾಳಹಸ್ತಿ ಸ್ಥಾವರದಲ್ಲಿನ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಿದೆ.

ಸೋಮಾನಿ ಸೆರಾಮಿಕ್ಸ್ ಇಂಟೀರಿಯರ್ ಮತ್ತು ಎಕ್ಸ್ ಟೀರಿಯರ್ ಸ್ಥಳದ ಸೌಂದರ್ಯವನ್ನು ಹೆಚ್ಚಿಸುವ, ವಿಶಾಲ ವ್ಯಾಪ್ತಿಯ ಉತ್ಪನ್ನಗಳನ್ನು ನೀಡುತ್ತದೆ14 ನೇ ಜುಲೈ, ಬೆಂಗಳೂರು: ಸೋಮಾನಿ ಸೆರಾಮಿಕ್ಸ್ ಲಿಮಿಟೆಡ್, ಸೆರಾಮಿಕ್ಸ್ ಮತ್ತು ಸಂಬಂಧಿತ ಉತ್ಪನ್ನಗಳ ವಿಭಾಗಗಳಲ್ಲಿ ನೈಪುಣ್ಯತೆ ಹೊಂದಿರುವ ಅಂತಾರಾಷ್ಟ್ರೀಯವಾಗಿ ಮೆಚ್ಚುಗೆ ಪಡೆದ ಸಂಸ್ಥೆಯಾಗಿದ್ದು, ಇಂದು ಬೆಂಗಳೂರಿನ ಕ್ಲಾರ್ಕ್ಸ್ ಎಕ್ಸೋಟಿಕಾದಲ್ಲಿ, ಸೋಮಾನಿ ಸೆರಾಮಿಕ್ಸ್ ಲಿ ನ ಎಂಡಿ ಮತ್ತು ಸಿಇಓ ಮಿ. ಅಭಿಷೇಕ್ ಸೋಮಾನಿ ಹಾಗೂ ಸೋಮಾನಿ ಸೆರಾಮಿಕ್ಸ್ ಲಿ ನ ಡೆಪ್ಯುಟಿ ಸಿಇಓ ಮಿ. ಅಮಿತ್ ಸಹಾಯ್ ರವರ ಉಪಸ್ಥಿತಿಯಲ್ಲಿ ಉತ್ಪನ್ನಗಳ ಅಸಾಧಾರಣ ಸಂಗ್ರಹವನ್ನು ಪ್ರಾರಂಭಿಸಲು ಸಂತೋಷಪಡುತ್ತದೆ.

ಅರ್ಥಪೂರ್ಣ ಅಸ್ತಿತ್ವವನ್ನು ರೂಪಿಸಲು, ತನ್ನ ಗ್ರಾಹಕರಿಗೆ ಹೊಸತನ ಮತ್ತು ಸೃಜನಶೀಲತೆಯನ್ನು ನೀಡುವ ಉದ್ದೇಶಕ್ಕೆ ಅನುಗುಣವಾಗಿ, ಸೋಮಾನಿ ಸೆರಾಮಿಕ್ಸ್ “ಅಸಾಧಾರಣ” ಬೆರಗುಗೊಳಿಸುವ ಹೊಸ ಉತ್ಪನ್ನಗಳ ಸಂಗ್ರಹವನ್ನು ಅನಾವರಣಗೊಳಿಸುತ್ತಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ, ಮತ್ತು ಗ್ರಾಹಕರ ಮನ ಗೆಲ್ಲಲಿದೆ. ಉತ್ಪನ್ನಗಳ ಶ್ರೇಣಿಯು ಡ್ಯುರಾಗ್ರೆಸ್, ವಿಟ್ರೋ, ಡ್ಯುರಾಸ್ಟೋನ್ ಮತ್ತು ಟೆಕ್ ಹೋಮೊಜೆನಾವನ್ನು ಒಳಗೊಂಡಿದೆ. ಪೂರ್ಣ ಪಾಲಿಶ್, ಹೈ ಗ್ಲಾಸ್ ಪಾಲಿಶ್ ಮತ್ತು ಮೈಕ್ರೋಸಿಡ್ ಫಿನಿಶ್ನಲ್ಲಿ ಲಭ್ಯವಿರುವ ಮ್ಯಾಟ್ ಫಿನಿಶ್ಗಳು ಮತ್ತು ಹಳ್ಳಿಗಾಡಿನ ಸ್ಪರ್ಶದ ಕೆತ್ತನೆಗಳನ್ನು ಹೊಂದಿರುವ ಉತ್ಪನ್ನಗಳನ್ನು ವೀಕ್ಷಿಸಲು ಪ್ರೇಕ್ಷಕರು. ಸೋಮಾನಿ ಮೂಲಕ ಅತ್ಯದ್ಭುತ ಸಂಗ್ರಹವನ್ನು ಮನೆಗೆ ತಂದಲ್ಲಿ ಕಲಾತ್ಮಕ ವರ್ಚಸ್ಸಿನಿಂದ ಸುತ್ತುವರೆದಂತೆ ಕಾಣುತ್ತದೆ.ಸೋಮಾನಿ ತಿರುಪತಿಯಲ್ಲಿನ ಕಾಳಹಸ್ತಿ ಸ್ಥಾವರದಲ್ಲಿ (ಎಪಿ) ತನ್ನ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಿದೆ, ಇದು ದಕ್ಷಿಣದ ಮಾರುಕಟ್ಟೆಗಳಿಗೆ ಸಾರಿಗೆ ಸಮಯವನ್ನು ಕಡಿಮೆ ಮಾಡಲು ನೆರವಾಗಲಿದೆ. ಬೆಂಗಳೂರಿನ ಪ್ರೇಕ್ಷಕರಿಗಾಗಿ ಸಾಕಷ್ಟು ಸಂಗ್ರಹವಿದ್ದು, ನೀವು ಸೋಮಾನಿ ಪ್ರಪಂಚದೊಳಗೆ ಒಮ್ಮೆ ಹೆಜ್ಜೆ ಇಟ್ಟಲ್ಲಿ ಆಯ್ಕೆ ಮಾಡಲು ಯಾವುದೇ ಆಯ್ಕೆಗಳ ಕೊರತೆ ಇರುವುದಿಲ್ಲ.

ಈ ಸಂದರ್ಭದಲ್ಲಿ ಮಾತನಾಡಿದ, ಸೋಮಾನಿ ಸೆರಾಮಿಕ್ಸ್ ಲಿಮಿಟೆಡ್ನ ಎಂಡಿ ಮತ್ತು ಸಿಇಒ ಶ್ರೀ ಅಭಿಷೇಕ್ ಸೋಮಾನಿ, “ಕಳೆದ 50 ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಸೋಮಾನಿ ಶ್ರಮಿಸುತ್ತಿದೆ, ಈ ವರ್ಷ ನಾವು ಭಾರತದಲ್ಲಿ ಎಲ್ಲಾ ಪ್ರದೇಶಗಳಲ್ಲಿ ಸಾಮರ್ಥ್ಯ ವಿಸ್ತರಣೆಗಳ ಮೇಲೆ ವಿಶೇಷ ಗಮನ ಹರಿಸಿದ್ದೇವೆ. ದಕ್ಷಿಣದ ಮಾರುಕಟ್ಟೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಪೂರೈಸಲು, ನಾವು ಕಾಳಹಸ್ತಿ ಸ್ಥಾವರದಲ್ಲಿ ನಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿದ್ದೇವೆ. ಈ ಸಾಮರ್ಥ್ಯ ಹೆಚ್ಚಳದೊಂದಿಗೆ ನಾವು ಈಗ ಜಾಗತಿಕವಾಗಿ ಪ್ರಮುಖ 10 ಸೆರಾಮಿಕ್ ತಯಾರಕರಲ್ಲಿ ಒಬ್ಬರಾಗಿದ್ದೇವೆ” ಎಂದು ಹೇಳಿದ್ದಾರೆ.

ವರದಿ:ಹರ್ಷ ಪಿ ಸತ್ಯ ವಿಸ್ಮಯ ಪತ್ರಿಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆ

Related Articles

Leave a Reply

Your email address will not be published.

Back to top button

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5275

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5275

Notice: ob_end_flush(): failed to send buffer of zlib output compression (1) in /home2/sathyavi/public_html/wp-content/plugins/really-simple-ssl/class-mixed-content-fixer.php on line 110