ಬೆಂಗಳೂರುಸತ್ಯ ವಿಸ್ಮಯ ಪತ್ರಿಕೆ

ಆರೋಗ್ಯ ಇಲಾಖೆ ಗುತ್ತಿಗೆ ನೌಕರರು ಪುನಃ ಬೀದಿಗೆ.!??

ಆರೋಗ್ಯ ಸೇವೆಯಲ್ಲಿ ವ್ಯತೆ ಸಂಭವ, ಇಲಾಖೆಯ ವಿಳಂಬ ದೋರಣೆ ಖಂಡಿಸಿದ ಆಯನೂರು ಮಂಜುನಾಥ್.

ಬೆಂಗಳೂರು: – ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸತತ ಎರಡು ವರ್ಷಗಳ ಹೋರಾಟದ ಫಲವಾಗಿ ಅಂದಿನ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಬೀ ಎಸ್ ಯಡಿಯೂರಪ್ಪ ಹಾಗೂ ಅಂದಿನ ಆರೋಗ್ಯ ಸಚಿವರಾದ ಶ್ರೀ ಬೀ ಶ್ರೀರಾಮಲು ಇವರು ನಿವೃತ್ತ ಐಎಎಸ್ ಅಧಿಕಾರಿ ಶ್ರೀ ಶ್ರೀನಿವಾಸಚಾರಿ, MLC ಆಯನೂರು ಮಂಜುನಾಥ್ ಹಾಗೂ ಎರಡು ಇಲಾಖೆ ಅಧಿಕಾರಿಗಳು ಹಾಗೂ ಆರ್ಥಿಕ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚನೆ ಮಾಡಿ ಸಮಿತಿಯು ದಿನಾಂಕ 28.12.2020 ಕೆ ತಮ್ಮ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ.ಈ ಹಿಂದೆ ಸಂಘದ ವತಿಯಿಂದ ಮತ್ತು ಮಾನ್ಯ ಶಾಸಕರು ಹಾಗೂ ಗೌರವಾಧ್ಯಕ್ಷರಾದ ಶ್ರೀ ಆಯನೂರು ಮಂಜುನಾಥ್ ರವರು ಸಹ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಆರೋಗ್ಯ ಸಚಿವರಿಗೆ ಬೇಡಿಕೆಗಳನ್ನು ಈಡೇರಿಸುವಂತೆ ಹಲವಾರು ಬಾರಿ ಒತ್ತಾಯಿಸಲಾಗಿದೆ, ಆದರೆ ಅದಕ್ಕೆ ವಿರುದ್ಧವಾಗಿ ನೌಕರರ ಆತ್ಮಸ್ಥೈರ್ಯ ಕುಗ್ಗಿಸುವಂತಹ ಆದೇಶಗಳನ್ನು ಅಭಿಯಾನ ನಿರ್ದೇಶಕರು NHM ಇವರು ಹೊರಡುತ್ತಿದ್ದಾರೆ ಎಂದು ಸಂಘದ (KSHCOEA) ರಾಜ್ಯಾಧ್ಯಕ್ಷರಾದ ವಿಶ್ವರಾಧ್ಯ ಎಚ್. ಯಮೋಜಿ ರವರು ತಿಳಿಸಿದ್ದಾರೆ.ಇದನ್ನು ಗಂಭೀರವಾಗಿ ಪರಿಗಣಿಸಿ ಶ್ರೀನಿವಾಸಚಾರಿ ವರದಿ ಅನುಷ್ಠಾನ ಹಾಗೂ ವಾರ್ಷಿಕ ಮೌಲ್ಯಮಾಪನ ರದ್ದುಪಡಿಸುವಂತೆ ಕೋರಿ ನೌಕರರು ದಿನಾಂಕ 07.07.2022ರಂದು ನೌಕರರು “ಬೆಂಗಳೂರು ಚಲೋ” ಮೂಲಕ ಪುನಃ ಬೀದಿಗೆ ಇಳಿಯುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಮುಖ್ಯಮಂತ್ರಿಗಳಿಗೆ ಸಂಘದ ಗೌರವಾಧ್ಯಕ್ಷರು ಪತ್ರದ ಮುಖೇನ ಆಗ್ರಹಿಸಿದ್ದಾರೆ (ವಿವರವಾದ ಮಾಹಿತಿ ಲಗತ್ತಿಸಿದೆ).ಈ ವಿಳಂಬ ದೊರಣೆ ಹಾಗೂ ನೌಕರರನ್ನು ಪದೇ ಪದೇ ಬೀದಿಗೆ ಇಳಿಯುವಂತೆ ಮಾಡುತ್ತಿರುವುದನ್ನು ಖಂಡಿಸಿ ಶಾಸಕರು ಹಾಗೂ ಸಂಘದ ಅಧ್ಯಕ್ಷರು ಆದ ಮಾನ್ಯ ಶ್ರೀ ಆಯನೂರು ಮಂಜುನಾಥ್ ಇವರು ಮಾನ್ಯ ಮುಖ್ಯಮಂತ್ರಿಗಳು ಮಧ್ಯಸ್ಥಿಕೆ ವಹಿಸಬೇಕು ಹಾಗೂ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.ಸುದ್ದಿ ಗೋಷ್ಠಿಯಲ್ಲಿ ವಿಶ್ವರಾಧ್ಯ ಎಚ್. ವೈ. (ರಾಜ್ಯ ಅಧ್ಯಕ್ಷರು), ಶ್ರೀಕಾಂತ್ ಸ್ವಾಮಿ, (ರಾಜ್ಯ ಪ್ರಧಾನ ಕಾರ್ಯದರ್ಶಿ) ಪಾಲ್ಗೊಂಡಿದ್ದರು.

ವರದಿ: ಅನಿಲ್ ಕುಮಾರ್ ಶಾಸ್ತ್ರಿ

Related Articles

Leave a Reply

Your email address will not be published.

Back to top button

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5275

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5275

Notice: ob_end_flush(): failed to send buffer of zlib output compression (1) in /home2/sathyavi/public_html/wp-content/plugins/really-simple-ssl/class-mixed-content-fixer.php on line 110