ಚಿಕ್ಕಬಳ್ಳಾಪುರಸತ್ಯ ವಿಸ್ಮಯ ಪತ್ರಿಕೆ
ಸುವರ್ಣ ಕರ್ನಾಟಕ ರಕ್ಷಣಾ ಸೇನೆ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳು ಪದಗ್ರಹಣ:-

ಬಾಗೇಪಲ್ಲಿ:– ತಾಲ್ಲೂಕಿನ ಸುವರ್ಣ ಕರ್ನಾಟಕ ರಕ್ಷಣಾ ಸೇನೆಯ ವತಿಯಿಂದ ಬಾಗೇಪಲ್ಲಿ ಪಟ್ಟಣದ ಪ್ರವಾಸಿಮಂದಿರದಲ್ಲಿಸುವರ್ಣ ಕರ್ನಾಟಕ ರಕ್ಷಣಾ ಸೇನೆ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳು ಪಟ್ಟಿಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ರಿಯಾಜ್ ಅಹಮದ್ ಬಿಡುಗಡೆ ಮಾಡಿದರು.

ತಾಲೂಕು ಘಟಕದ ಅಧ್ಯಕ್ಷರಾಗಿ ಅನ್ಸರ್ ಪಾಷ, ಸಹ ಕಾರ್ಯದರ್ಶಿಯಾಗಿ ಆಸಿಫ್, ಗುಡಿಬಂಡೆ ತಾಲೂಕಿನ ಉಪಾಧ್ಯಕ್ಷರಾಗಿ ಮುಜೀಬ್, ತಾಲೂಕಿನ ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಆಜಾಮ್ ಪಾಷಾ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಹೊಸಕೆರೆ ಶ್ರೀನಿವಾಸ್ , ಉಪಾಧ್ಯಕ್ಷರಾದ ಎಸ್ ವೇಣು ರೆಡ್ಡಿ, ಅರಕಲಗೂಡು ತಾಲೂಕಿನ ಉಪಾಧ್ಯಕ್ಷರಾದ ಪ್ರಕಾಶ್ ಉಪಸ್ಥಿತರಿದ್ದರು
ವರದಿ:ಸುಧಾಕರ ಹೆಚ್ ಪಿ ಬಾಗೇಪಲ್ಲಿ