ತುಮಕೂರುಸತ್ಯ ವಿಸ್ಮಯ ಪತ್ರಿಕೆ

ಅರಣ್ಯ ಇಲಾಖೆಯಿಂದ ಆಜಾದಿಕ ಅಮೃತ ಮಹೋತ್ಸವ ಹಾಗೂ ವಿಶ್ವ ಪರಿಸರ ದಿನಾಚಾರಣೆ : ಸಮುದಾಯ ಭಾಗವಹಿಸುವಿಕೆಗೆ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಕರೆ.

ಗುಬ್ಬಿ: ಅಜಾದಿಕ ಅಮೃತ ಮಹೋತ್ಸವದ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಜೂನ್ 5 ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ಗುಬ್ಬಿ ವಲಯದ ವತಿಯಿಂದ ಲಕ್ಕೇನಹಳ್ಳಿ ಗ್ರಾಮದ ತುಳಸಿಕಟ್ಟೆ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಸಿ ನೆಡುವ ಮೂಲಕ ನಡೆಸಲಾಗುವುದು ಎಂದು ವಲಯ ಅರಣ್ಯಾಧಿಕಾರಿ ದುಗ್ಗಪ್ಪ ತಿಳಿಸಿದ್ದಾರೆ.”ಹಸಿರು ಕರ್ನಾಟಕದ” ಭಾಗವಾಗಿ ಜೂನ್ 5 ರಿಂದ 12 ರವರೆಗೆ “ಬೀಜ ಬಿತ್ತನೆ ಅಭಿಯಾನ 2022-23” ಹೆಸರಿನಲ್ಲಿ ಸಪ್ತಾಹ ಕಾರ್ಯಕ್ರಮವನ್ನು ಗುಬ್ಬಿ ಅರಣ್ಯ ವಲಯದಲ್ಲಿ ಆಚರಿಸಲು ನಿರ್ಧರಿಸಲಾಗಿದೆ.

ಈ ನಿಟ್ಟಿನಲ್ಲಿ ಜೂನ್ 5 ರಂದು ಗುಬ್ಬಿ ವಲಯದ ಮರಡಿಗುಡ್ಡ ಮೀಸಲು ಅರಣ್ಯ ಪ್ರದೇಶದಲ್ಲಿ ನಲ್ಲೂರು ಗ್ರಾಮದ ಲೋಕಾಂಬ ಪ್ರೌಢಶಾಲೆಯ ಸಹಯೋಗದಲ್ಲಿ ಬೀಜ ಬಿತ್ತನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಎರಡೂ ಕಾರ್ಯಕ್ರಮಕ್ಕೆ ತಾಲೂಕಿನ ಸ್ವಯಂ ಸೇವಕರು, ಪರಿಸರ ಪ್ರೇಮಿಗಳು ಮತ್ತು ವಿಶೇಷವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಎನ್.ಸಿ.ಸಿ ಹಾಗು ಸ್ಕೌಟ್ ಅಂಡ್ ಗೈಡ್ಸ್ , ಸಂಘ ಸಂಸ್ಥೆಯವರು ಮತ್ತು ಸಾರ್ವಜನಿಕರು ಭಾಗವಹಿಸುವುದು ಅತೀ ಮುಖ್ಯ. ಆಸಕ್ತರು ಜೂನ್4 ರೊಳಗೆ ಗುಬ್ಬಿ ವಲಯ ಅರಣ್ಯ ಅಧಿಕಾರಿಗಳ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ವರದಿ: ರಾಘವೇಂದ್ರ ಗುಬ್ಬಿ

Related Articles

Leave a Reply

Your email address will not be published.

Back to top button

protected