ತಿಪಟೂರು:ಕಂದಾಯ ಇಲಾಖೆ ಮತ್ತು ತಾಲೂಕು ಆಡಳಿತ, ಉಪವಿಭಾಗಾಧಿಕಾರಿಗಳು ಮತ್ತು ತಹಸಿಲ್ದಾರ್ “ಜಿಲ್ಲಾಧಿಕಾರಿಗಳ ನಡೆ -ಹಳ್ಳಿ ಕಡೆ” ಸಾರ್ವಜನಿಕ ಮತ್ತು ರೈತರ ಕುಂದುಕೊರತೆ ಗ್ರಾಮ ಭೇಟಿ ಮತ್ತು ವಾಸ್ತವ್ಯ ಕಾರ್ಯಕ್ರಮ

ತಿಪಟೂರು: ಕಂದಾಯ ಇಲಾಖೆ ಮತ್ತು ತಾಲೂಕು ಆಡಳಿತ, ಉಪವಿಭಾಗಾಧಿಕಾರಿಗಳು ಮತ್ತು ತಹಸಿಲ್ದಾರ್ “ಜಿಲ್ಲಾಧಿಕಾರಿಗಳ ನಡೆ -ಹಳ್ಳಿ ಕಡೆ” ಸಾರ್ವಜನಿಕ ಮತ್ತು ರೈತರ ಕುಂದುಕೊರತೆ ಗ್ರಾಮ ಭೇಟಿ ಮತ್ತು ವಾಸ್ತವ್ಯ ಕಾರ್ಯಕ್ರಮ ತಿಪಟೂರು ತಾಲೂಕು, ಕಿಬ್ಬನಹಳ್ಳಿ ಹೋಬಳಿ, ಜಕ್ಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ದಂಡಾಧಿಕಾರಿಗಳು ಚಂದ್ರಶೇಖರ್ ಗ್ರಾಮ ಭೇಟಿ ಸಂದರ್ಭದಲ್ಲಿ ತಾಲೂಕು ಆಡಳಿತ ವ್ಯಾಪ್ತಿಗೆ ಒಳಪಡುವ ಎಲ್ಲಾ ಇಲಾಖೆಯ ವತಿಯಿಂದ 113 ಅರ್ಜಿಗಳನ್ನು ಸಾರ್ವಜನಿಕರು ನೀಡಿದ್ದು, ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸುಮಾರು 152 ಅರ್ಜಿಗಳನ್ನು ಸಾರ್ವಜನಿಕರು ನೀಡಿದ್ದು, ಆದಷ್ಟು ಅರ್ಜಿಗಳನ್ನು ಕಾರ್ಯಕ್ರಮದ ಸ್ಥಳದಲ್ಲಿ ಇತ್ಯರ್ಥ ಮಾಡಿ, ಉಳಿಕೆ ಅಹವಾಲುಗಳನ್ನು ಪರಿಶೀಲನೆ ಮಾಡಿ ತಕ್ಷಣವೇ ಇತ್ಯರ್ಥ ಮಾಡುತ್ತೇವೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಎತ್ತಿನಹೊಳೆ ಹೋರಾಟ ಸಮಿತಿ ಉಪಾಧ್ಯಕ್ಷರಾದ ಬಿ ಬಿ ಸಿದ್ದಲಿಂಗಮೂರ್ತಿ ಮಾತನಾಡಿ ರೈತರು ಬದುಕಲು ನೀರು ಮುಖ್ಯ ಆದರೆ ತಿಪಟೂರು ತಾಲ್ಲೂಕಿನಲ್ಲಿ ಹೇಮಾವತಿ ನೀರು ಹರಿದು ಹೋಗಿದೆ ಹಾಗೂ ಎತ್ತಿನಹೊಳೆ ನೀರು ಹರಿದು ಹೋಗುತ್ತಿದೆ, ಆದರೆ ತುರುವೇಕೆರೆ, ಗುಬ್ಬಿ ತಾಲ್ಲೂಕಿನಲ್ಲಿ ಹೇಮಾವತಿ ನೀರನ್ನು ಉಪಯೋಗಿಸಿಕೊಂಡು ಶ್ರೀಮಂತ ತಾಲೂಕು ಆಗಿದೆ. ನಾವು 2018ರಲ್ಲಿ ಎತ್ತಿನಹೊಳೆ ಹೋರಾಟ ಸಮಿತಿಯಿಂದ ಹೋರಾಟ ಮಾಡಿಕೊಂಡು ಬಂದಿದ್ದು ಸರ್ಕಾರದಿಂದ 1:30 ಟಿಎಂಸಿ ನೀರಿಗೆ ಒತ್ತಾಯಿಸಿದರು ಉತ್ತರವಿಲ್ಲ, ಇದೇ ರೀತಿ ರೈತರ ಮೇಲೆ ಉದಾಸೀನ ಮಾಡುವುದು ಕಂಡು ಬಂದರೆ ಹೋರಾಟ ಮಾಡುವುದಾಗಿ ಮನವಿ ಸಲ್ಲಿಸಿದರು. ರೈತ ಮುಖಂಡ ತಿಮ್ಲಾಪುರ ಚಂದನ್ ಮಾತನಾಡುತ್ತಾ ರೈತರು ಕಷ್ಟಪಟ್ಟು ಬೆಳೆದು ಮಾರುವ ರಾಗಿಗೂ ಸಹ ಭ್ರಷ್ಟಾಚಾರ ತುಂಬಿದೆ, ರೈತನಿಗೆ ತನ್ನ ಜಮೀನನ್ನ ಸರಿಯಾಗಿ ಸರ್ವೆ ಮಾಡಿಸದೆ, ಅದ್ ಬಸ್ತ್ ಮಾಡಿಸದೆ ರೈತರನ್ನು ಕೋರ್ಟು ಕಚೇರಿಗೆ ಆಲಿಸುತ್ತಾರೆ, ಅಧಿಕಾರಿಗಳಲ್ಲಿ ಭ್ರಷ್ಟಾಚಾರ ಜಾಸ್ತಿ ಆಗಿದೆ ಎಂದು ತಿಳಿಸಿದರು. ರೈತ ಮುಖಂಡ ಸಚಿನ್ ಮಾತನಾಡಿ ಸರ್ಕಾರದಿಂದ ರೈತರಿಗೆ ಎತ್ತಿನಹೊಳೆ ಯೋಜನೆ ಹಣ ಬಿಡುಗಡೆ ಮಾಡಿಸುವಂತೆ, ಹಾಗೂ 1:30 ಟಿಎಂಸಿ ನೀರನ್ನು ಎತ್ತಿನಹೊಳೆ ಯೋಜನೆಯಿಂದ ತಿಪಟೂರು ತಾಲೂಕಿಗೆ ಮಂಜೂರು ಮಾಡುವಂತೆ ಮನವಿ ನೀಡಿದರು. ತಾಲೂಕು ವ್ಯಾಪ್ತಿಗೆ ಒಳಪಡುವ ತಾಲೂಕು ಆಡಳಿತ ಎಲ್ಲ ಇಲಾಖೆಯ ಮುಖ್ಯ ಅಧಿಕಾರಿಗಳು ತಮ್ಮ ಇಲಾಖೆಯಿಂದ ಬರುವ ಸವಲತ್ತುಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ರಾಜಣ್ಣ, ಉಪಾಧ್ಯಕ್ಷರು ಗೌರಮ್ಮ, ಗ್ರೇಡ್2 ತಹಸಿಲ್ದಾರ್ ಜಗನ್ನಾಥ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಸುದರ್ಶನ್, ಕಿಬ್ಬನಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ಕಾಂತರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ತಾಲ್ಲೂಕು ಆರೋಗ್ಯ ಅಧಿಕಾರಿಗಳು ಹಾಗೂ ಕಾರ್ಯಕ್ರಮದಲ್ಲಿ ರೈತರು, ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ದಿ:ಸತ್ಯ ವಿಸ್ಮಯ ಪತ್ರಿಕೆ