ತುಮಕೂರುಸತ್ಯ ವಿಸ್ಮಯ

ಕೆಪಿಟಿಸಿಎಲ್ ವತಿಯಿಂದ 400ಕೆವಿ ಸ್ವಿಚಿಂಗ್ ಸ್ಟೇಷನ್ ಕಾಮಗಾರಿಯಿಂದ ನೂರಾರು ರೈತರಿಗೆ ತೊಂದರೆಯಾಗುತ್ತಿದ್ದು ಸರ್ಕಾರ ಕೂಡಲೇ ಸ್ವಿಚಿಂಗ್ ಸ್ಟೇಷನ್ ಬೇರೆಡೆಗೆ ಸ್ಥಳಾಂತರಿಸಲು ಒತ್ತಾಯ…

ತುಮಕೂರು ಜಿಲ್ಲೆ ತಿಪಟೂರು ಚಿಕ್ಕನಾಯ್ಕನಹಳ್ಳಿ:  ತಾಲೂಕು ಹುಳಿಯಾರು ಹೋಬಳಿ ಡಿಂಕನಹಳ್ಳಿ ಗ್ರಾಮದಲ್ಲಿ ಕೆಪಿಟಿಸಿಎಲ್ ವತಿಯಿಂದ 400ಕೆವಿ ಸ್ವಿಚಿಂಗ್ ಸ್ಟೇಷನ್ ಕಾಮಗಾರಿಯಿಂದ ನೂರಾರು ರೈತರಿಗೆ ತೊಂದರೆಯಾಗುತ್ತಿದ್ದು ಸರ್ಕಾರ ಕೂಡಲೇ ಸ್ವಿಚಿಂಗ್ ಸ್ಟೇಷನ್ ಬೇರೆಡೆಗೆ ಸ್ಥಳಾಂತರಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.ತಿಪಟೂರು ಗ್ರಾಮದೇವತೆ ಶ್ರೀಕೆಂಪಮ್ಮದೇವಿ ದೇವಾಲಯದಿಂದ ಹೊರಟ ಪ್ರತಿಭಟನಾ ಮೆರವಣಿಗೆ ದೊಡ್ಡಪೇಟೆ ಬಿ.ಹೆಚ್. ರಸ್ತೆ ಮೂಲಕ ಸಾಗಿ ತಿಪಟೂರು ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರಸಲ್ಲಿಸಲಾಯಿತು.ಪ್ರತಿಭಟನಾ ನಿರತರನ್ನ ಉದೇಶಿಸಿ ಮಾತನಾಡಿದ ಭಾರತೀಯ ಕಿಸಾನ್ ಮೋರ್ಚ ಜಿಲ್ಲಾಧ್ಯಕ್ಷ ಕೋಡಿಹಳ್ಳಿ ಜಗದೀಶ್ ಮಾತನಾಡಿ,  ಸರ್ಕಾರ ಹುಳಿಯಾರು ಹೋಬಳಿ ಡಿಂಕನಹಳ್ಳಿ ಗ್ರಾಮದಲ್ಲಿ 400ಕೆವಿ ಸಾಮರ್ಥ್ಯದ ಸ್ವಿಚ್ಚಿಂಗ್ ಸ್ಟೇಷನ್ ಪ್ರಾರಂಭಿಸುತ್ತಿದ್ದು ಈ ಯೋಜನೆಯಿಂದ ಡಿಂಕನಹಳ್ಳಿ ಸೇರಿದಂತೆ ಸುತ್ತಮುತ್ತಲ ನೂರಾರು ಫಲವತ್ತಾದ ಕೃಷಿ ಜಮೀನು ಹಾಳಾಗುತ್ತಿದೆ ಎಂದರು.ಫಲಭರಿತ ತೆಂಗು, ಅಡಿಕೆ, ಬಾಳೆ ತೇಗ ಸೇರಿದಂತೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬೆಳೆಗಳು ನಷ್ಟವಾಗುತ್ತದೆ. ಆದರಿಂದ ಸರ್ಕಾರ ಬಂಜರು ಭೂಮಿ ಇರುವಂತಹ ಕಡೆಗೆ ಸ್ಥಳಾಂತರ ಮಾಡಿ ಅಲ್ಲಿಯ ರೈತರಿಗೆ ಸರ್ಕಾರದ ನಿಯಮಾನುಸಾರ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಉಪಸ್ಥಿತರಿದ ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯರಾಮಚಂದ್ರಯ್ಯ ಮಾತಮಾಡಿ, ಡಿಂಕನಹಳ್ಳಿ ಸುತ್ತಮುತ್ತಲ ಕೃಷಿ ಭೂಮಿಯಲ್ಲಿ ಪವರ್ ಸ್ವಿಚಿಂಗ್ ಸ್ಟೆಷನ್ ಪ್ರಾರಂಭಿಸುತ್ತಿರುವುದು ಖಂಡನೀಯ ಈ ಬಗ್ಗೆ ಚಿಕ್ಕನಾಯ್ಕನಹಳ್ಳಿ ಕ್ಷೇತ್ರದ ಶಾಸಕರು ಹಾಗೂ ಸಚಿವ ಜೆ.ಸಿ.ಮಾಧುಸ್ವಾಮಿಯವರಿಗೆ ಮನವರಿಕೆ ಮಾಡಿ ಯೋಜನೆ ಸ್ಥಳಾಂತರಕ್ಕೆ ಮನವಿ ಮಾಡಲಾಗಿದೆ. ಆದರೂ ಸಹ ಸಚಿವರು ಅದೇ ಸ್ಥಳದಲ್ಲಿಯೇ ಸ್ವಿಚಿಂಗ್ ಸ್ಟೇಷನ್ ಮಾಡುವುದಾಗಿ ಹಠಕ್ಕೆ ಬಿದ್ದಿರುವುದು ಖಂಡನೀಯ ಎಂದರು.ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಜನರ ಪರವಾಗಿರಬೇಕು ಜನವಿರೋಧಿಯಾಗಿ ವರ್ತಿಸಬಾರದು  ರೈತರ ವಿರೋಧಿಯಾಗಿ ವರ್ತಿಸಿದರು ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತವೇ  ಯಾವುದೇ ಕಾರಣಕ್ಕೂ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಜನವಿರೋಧಿಯಾಗಿ ವರ್ತಿಸಬಾರದು  ರೈತರ ವಿರೋಧಿಯಾಗಿ ವರ್ತಿಸಿದರು ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತವೇ  ಯಾವುದೇ ಕಾರಣಕ್ಕೂ ಯೋಜನೆಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರುಪುಟ್ಟರಾಜು ಗೌರವಾಧ್ಯರು, ಜಿಲ್ಲಾಧ್ಯಕ್ಷರು ಕೋಡಿಹಳ್ಳಿ ಜಗದೀಶ್, ಕೆಂಕೆರೆ ಸತೀಶ್ ಹಸಿರುಸೇವೆ ರಾಜ್ಯಾಧ್ಯಕ್ಷರು, ಬಸ್ತಿಹಳ್ಳಿ ರಾಜಣ್ಣ, ತಿಮ್ಲಪುರ ದೇವರಾಜು, ಗಂಗಣ್ಣ, ರಾಮಚಂದ್ರಯ್ಯ ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯರು, ಪ್ರಕಾಶಯ್ಯ, ನವೀನ್,  ಸ್ವಾಮಿ ಕಾಂತರಾಜು ಮತ್ತಿತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ವರದಿ: ಸ್ವಾಮಿ ತಿಮ್ಮಲಾಪುರ

Related Articles

Leave a Reply

Your email address will not be published.

Back to top button

protected