ತುಮಕೂರುಸತ್ಯ ವಿಸ್ಮಯ ಪತ್ರಿಕೆ

ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಜೀವಿತ ಮಕ್ಕಳ ಬೇಸಿಗೆ ಶಿಬಿರ : ಟೆಕ್ನಿಕಲ್ ಶೋನಲ್ಲಿ ಕಲೆ ಪ್ರದರ್ಶಿಸಿದ ಪುಟ್ಟ ಮಕ್ಕಳು.

ಗುಬ್ಬಿ: ಪ್ರತಿ ವರ್ಷದಂತೆ ನಡೆಯುವ ಮಕ್ಕಳ ಶಿಬಿರಕ್ಕೆ ವಿಶೇಷತೆ ನೀಡಿದ ಗುಬ್ಬಿ ವೀರಣ್ಣ ಟ್ರಸ್ಟ್ ಈ ಬಾರಿ 10 ರಿಂದ 14 ವರ್ಷದ ಆಯ್ದ 25 ಮಕ್ಕಳಿಗೆ ತರಬೇತಿ ನೀಡಿ ಉತ್ತಮ ರಂಗ ಪಟ್ಟು ಕಲಿಸಿ ಬಾಲ ಕಲಾವಿದರ ಸೃಷ್ಟಿಗೆ ಜೀವಿತ ಮಕ್ಕಳ ಬೇಸಿಗೆ ಶಿಬಿರ ಸಾಕ್ಷಿಯಾಗಿದೆ.ಕಳೆದ ಒಂದು ತಿಂಗಳಿಂದ ಮಕ್ಕಳಿಗೆ ಸಂಜೆಯವರಿಗೆ ರಂಗಭೂಮಿ ಮಹತ್ವ, ಆಸಕ್ತಿ, ಕಲೆಯ ಆರಾಧನೆ ಬಗ್ಗೆ ಉಪನ್ಯಾಸ ನೀಡಿದೆ. ಹೆಸರಾಂತ ನಿರ್ದೇಶಕ, ರಂಗತಜ್ಞ ಉತ್ತರಾಖಂಡ್ ರಾಜ್ಯದ ಸುವರ್ಣ ರಾವತ್ ಅವರ ನಿರ್ದೇಶನದಲ್ಲಿ ಇಡೀ ಶಿಬಿರ ನಡೆದಿದೆ. ಮಕ್ಕಳು ಉಚ್ಚರಿಸುವ ಸಂಭಾಷಣೆಯಿಂದ ನಟನೆ, ನೃತ್ಯ, ಕಲಿಸಿ ಜೊತೆಯಲ್ಲಿ ನಾಟಕದಲ್ಲಿ ಪಾತ್ರಕ್ಕೆ ಜೀವ ತುಂಬುವ ನೈಜ ಅಭಿನಯವನ್ನು ಮಕ್ಕಳಲ್ಲಿ ಕಳಿಸಿ ಇಂದು ಯಾವುದೇ ವೇದಿಕೆಯಲ್ಲೂ ಸರಾಗವಾಗಿ ಮಾತನಾಡುವ ಅಭಿನಯಿಸುವ ಚತುರತೆ ಬೆಳೆಸಿಕೊಂಡಿರುವುದು ಗುಬ್ಬಿ ವೀರಣ್ಣ ಟ್ರಸ್ಟ್ ಕೆಲಸಕ್ಕೆ ಸಾರ್ಥಕತೆ ಬಂದಿದೆ.

ರಂಗ ನಿರ್ದೇಶಕ ಸುವರ್ಣ ರಾವತ್ ಅವರ ಹಿಂದಿ ರಚಿತ, ಎಂ.ವಿನುತ್ ಕುಮಾರ್ ಅವರ ಕನ್ನಡ ಅನುವಾದ ಮೈನಾ ಹಾಡು ಎಂಬ ಮಕ್ಕಳ ನಾಟಕವನ್ನು ಶಿಬಿರದ ಮಕ್ಕಳಿಗೆ ಕಲಿಸಿ ಟೆಕ್ನಿಕಲ್ ಶೋ ಮೂಲಕ ನಾಟಕ ಪ್ರದರ್ಶನ ಮಾಡಲಾಯಿತು. ಚುರುಕಿನ ಶಿಬಿರಾರ್ಥಿ ಮಕ್ಕಳು ಒಂದು ತಪ್ಪು ಮಾಡದೆ ಅಚ್ಚುಕಟ್ಟಾಗಿ ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದು ಶಿಬಿರಕ್ಕೆ ಮತ್ತೊಂದು ಕ್ರೆಡಿಟ್. ನಾಟಕದ ತೆರೆಮೆರೆ ಕಲಾವಿದರ ತನ್ಮಯತೆ ಸಹ ನಾಟಕ ಯಶಸ್ವಿಗೆ ಮತ್ತೊಂದು ಗರಿ.ಒಂದು ತಾಸು ಪ್ರದರ್ಶನಗೊಳ್ಳುವ ಈ ನಾಟಕದಲ್ಲಿ ಹಾಡುಗಳು, ಸಂಗೀತ ಕೂಡಾ ಪ್ರಮುಖವಾದದು.

ಸಾಹಿತ್ಯ, ಸಂಗೀತ ನಿರ್ದೇಶಕ ರಕ್ಷಿತ್ ಅಶ್ವಥ್, ಹಿನ್ನಲೆ ಗಾಯಕರಾದ ಪೂಜಾ, ಭಾರಿತಾಯ, ನಾಗರತ್ನ, ತನ್ಮಯಿ, ಉದಯರವಿ ಇವರ ಜೊತೆಗೆ ನೃತ್ಯ ಸಂಯೋಜನೆ ವಿನೀತ್ ಕುಮಾರ್ ನಡೆಸಿದರು. ಇವೆಲ್ಲದರ ಮಧ್ಯೆ ಮಕ್ಕಳಿಗೆ ಅಗತ್ಯ ರಂಗ ಸಲಕರಣೆ ತಯಾರಿಸಿದ ಕಲಾ ನಿರ್ದೇಶಕ ಸುರೇಶ್ ಕೂನಿ ಥರ್ಮೋಕೋಲ್ ಮೂಲಕ ಮಕ್ಕಳಿಗೆ ಅಗತ್ಯ ಕಾಸ್ಟ್ಯೂಮ್ ತಯಾರಿಸಿದ್ದು ಇಡೀ ಶಿಬಿರದಲ್ಲೇ ಅತ್ಯಾಕರ್ಷಣಿಯವಾಗಿತ್ತು.

ವರದಿ: ರಾಘವೇಂದ್ರ ಗುಬ್ಬಿ

Related Articles

Leave a Reply

Your email address will not be published.

Back to top button
protected