ಬಾಗೇಪಲ್ಲಿ ತಾಲೂಕಿನ ಈದ್ ಮಿಲನ್ ಸಮಿತಿ ವತಿಯಿಂದ ಹಿಂದು-ಮುಸ್ಲಿಂ ಐಕ್ಯತೆಯ ಸಮಾವೇಶ.

ಬಾಗೇಪಲ್ಲಿ:- ತಾಲೂಕಿನ ಜಾಮಿಯಾ ಷಾದಿ ಮಹಲ್ ಈದ್ಗಾ ರಸ್ತೆ ದಿನಾಂಕ 10-05-2022 ರಂದು ನಡೆದ ಸೌಹಾರ್ದ ಸಮಿತಿ ಸಮಾವೇಶವನ್ನು ನಡೆಸಲಾಗಿದ್ದು ಈ ಸಮಾವೇಶ ದಲ್ಲಿ ಹಿಂದೂ-ಮುಸ್ಲಿಂ- ಕ್ರೈಸ್ತರು ಪಾಲ್ಗೊಂಡಿದ್ದು .ಪ್ರಸಕ್ತ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ ಮೊದಲು ಧರ್ಮ ಸಂರಕ್ಷಣೆಯ ಕೆಲಸ ಆಗಬೇಕಿದೆ ಶ್ರೀವಿದ್ಯಾ ನಂದಗಿರಿ ಸ್ವಾಮೀಜಿ ಅವರು ಹೇಳಿದರು. ಅದ್ವೈತ ಸಿದ್ಧಾಂತವನ್ನು ಒಪ್ಪಿಕೊಂಡಿರುವ ದೇಶ ನಮ್ಮದು, ಎಲ್ಲವನ್ನು ಒಂದು ಮಾಡುವ ತತ್ವ, ಅಹಂಕಾರ ಮತ್ತು ರಾಜಕೀಯವನ್ನು ದೂರವಿಟ್ಟು ನಡೆಯುವ ತತ್ವವನ್ನು ಒಪ್ಪಿಕೊಂಡ ಜನ ನಾವು. ನಮ್ಮಿಂದ ತಪ್ಪಾದಾಗ ಆತ್ಮಾವಲೋಕನ ಮಾಡಿಕೊಳ್ಳಬೇಕು, ಅದು ಸಾಮರಸ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.ಮಾಜಿ ಶಾಸಕರಾದ. ಎನ್. ಸಂಪಂಗಿ ರವರು ಮಾತನಾಡಿ ಬಾಗೇಪಲ್ಲಿ ತಾಲೂಕು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ನಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಸಿದರು ನಮ್ಮಲ್ಲಿ ಯಾವುದೇ ಬೇಧಭಾವವಿಲ್ಲದೆ ನಡೆಸಿಕೊಂಡು ಬರುತ್ತಿದ್ದೇವೆ ಹಿಂದು-ಮುಸ್ಲಿಂ- ಕ್ರೈಸ್ತರು ಅಣ್ಣ-ತಮ್ಮಂದಿರಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿಕೊಂಡು ಬಂದಿದ್ದಾರೆ ನಮ್ಮಲ್ಲಿ ಯಾವುದೇ ಆಗಲಿ ಬೇದ ಭಾವ ಇಲ್ಲದೆ ಜೀವಿಸುತ್ತಾ ಬಂದಿದ್ದೇವೆ ಬಾರತ ತಾಯಿಗೆ ನಾವೆಲ್ಲರೂ ಒಂದೇ. ಇದರಲ್ಲಿ ಯಾವುದೇ ಜಾತಿ ಮತಗಳು ಹಾಗೂ ರಾಜಕೀಯವನ್ನು ತರುವುದು ನಮ್ಮಗೆ ಇಷ್ಟವಿಲ್ಲ ಎಂದು ತಿಳಿಸಿದರು.ಡಾ// ಅನಿಲ್ ಕುಮಾರ್ ರವರು ಮಾತನಾಡಿದೇವನೊಬ್ಬ ನಾಮ ಹಲವು! ಈ ಸೌಹಾರ್ದಯುತ ಜೀವನದಿಂದಾಗಿ ಈ ಭಾಗದಲ್ಲಿ ಹಲವಾರು ವರ್ಷಗಳಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಅದಲ್ಲದೇ ಯಾವುದೇ ಕೋಮು ಸಂಘರ್ಷಗಳಿಗೆ ಎಡೆ ಮಾಡಿಕೊಡದಂತೆ ಎಲ್ಲಾ ಧರ್ಮದ ಮುಖಂಡರು ನಡೆದುಕೊಂಡು ಬಂದಿದೆ ಎಂದರು.ಮಂಜುನಾಥ ರೆಡ್ಡಿ ಸಿ.ಪಿ.ಐ (ಎಂ)ಮುಖಂಡರು ರವರು ಮಾತನಾಡಿ ಇತ್ತೀಚಿಗೆ ನಡೆಯುತ್ತಿರುವ ಸಂಗತಿಗಳು ನಮ್ಮ ದೇಶಕ್ಕೆ ಶೋಭೆ ತರೋದಿಲ್ಲ.

ಸಂವಿಧಾನವನ್ನು ಬಹಿಷ್ಕರಿಸಿ ನಾವು ಭಾರತೀಯರಾಗುವುದು ಸಾಧ್ಯವಿಲ್ಲ. ಒಡೆದುದನ್ನು ಒಂದು ಗೂಡಿಸೋದು ಧರ್ಮ ಆದರೆ ಒಂದಾಗಿರುದನ್ನು ಒಡೆಯುವುದು ರಾಜಕಾರಣ ಎಂದು ಗುರೂಜಿ ರವರು ಹೇಳಿದರು ಪುರಸಭೆ ಅಧ್ಯಕ್ಷರು ಶ್ರೀಮತಿ ರೇಷ್ಮಾ ಬಾನು ರವರು ಮಾತನಾಡಿ ಜಾತ್ರೆ ಸಮಯದಲ್ಲೂ ಇಲ್ಲಿನ ಹಿಂದೂ ಬಾಂಧವರ ಜೊತೆಯಾಗಿಯೇ ಇದ್ದುಕೊಂಡು ಮುಸ್ಲಿಂ ಯುವಕರು ನೆರವಾಗುತ್ತಾರೆ. ಸರ್ವಧರ್ಮಿಯರು ಹಬ್ಬದಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಇವರೊಳಗಿನ ಸೌಹಾರ್ದಕ್ಕೆ ಧರ್ಮ ಎಂದೂ ಅಡ್ಡಿಯಾಗಿಲ್ಲ. ಜಾತಿಯ ಪ್ರಶ್ನೆಯೇ ಬರುವುದಿಲ್ಲ. ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಬಾಳಿ ಬದುಬೇಕು. ಬಾಗೇಪಲ್ಲಿ ಹಾಗೂ ನಮ್ಮ ಸುತ್ತ ಮುತ್ತಲಿನ ಗ್ರಾಮದಲ್ಲಿ ಇರುವ ನಾವೆಲ್ಲರೂ ಒಂದೇ ನಮ್ಮಲ್ಲಿ ಬೇಧ ಬಾವ ಎಂಬುದೇ ಇಲ್ಲ, ಈ ಕಾರಣಕ್ಕೆ ನಾವು ಶಾಂತಿಯುತವಾಗಿ ಬದುಕುತ್ತಿದ್ದೇವೆ, ಇದೇ ರೀತಿಯ ವಾತಾವರಣ ಮುಂದುವರೆಯಲಿ, ಹಿಂದೂ , ಮುಸ್ಲಿಂ ಕ್ರೈಸ್ತರು ಭೇದಭಾವ ಸಲ್ಲದು. ಎಂದರುಈ ಸಮಾವೇಶದಲ್ಲಿ ಶ್ರೀ ಮುನಿರಾಜು ಸಮಾಜ ಸೇವಕರು , ಜನಾಬ್ ನಸೀರ್ ಅಹಮದ್, ವಿಧಾನಪರಿಷತ್ ಸದಸ್ಯರು, ಶ್ರೀ ಮುನೇಗೌಡ, ನಿವೃತ್ತ ಪ್ರಾಂಶುಪಾಲರು ಪ್ರೊ ಎ.ಕೆ. ನಿಂಗಪ್ಪ, ಮುಖಂಡರು ಎ. ವಿ . ಸುಧಾಕರ್ಮಹಮ್ಮದ್ ನೂರುಲ್ಲಾ, ಆರಿಫ್ರಿ ರಿಜ್ವಾನ್ ಸಾಬ್, ಉಪಸಿದ್ದರುಆಗಿದರು.
ವರದಿ:ಸುಧಾಕರ ಹೆಚ್ ಪಿ ಬಾಗೇಪಲ್ಲಿ