ತುಮಕೂರುಸತ್ಯ ವಿಸ್ಮಯ ಪತ್ರಿಕೆ

ಶಾರ್ಟ್ ಸರ್ಕ್ಯೂಟ್ ನಿಂದ ಮಂಜು ಹೋಟೆಲ್ ಸಂಪೂರ್ಣ ಭಸ್ಮ.

*

ಗುಬ್ಬಿ : ಪಟ್ಟಣದ ತಾಲೂಕು ಕಚೇರಿಯ ಮುಂಭಾಗದಲ್ಲಿರುವ ಹೆಸರಾಂತ ಮಂಜು ಹೋಟೆಲ್(ಗೌರಮ್ಮ ಹೋಟೆಲ್)ಗೆ ಶನಿವಾರ ತಡರಾತ್ರಿ ಸಮಯದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸಂಪೂರ್ಣ ಸುಟ್ಟು ಕರಕಲಾಗಿದೆ.ಈಚೆಗೆ ನವಿಕೃತಗೊಂಡಿದ್ದ ಹೋಟೆಲ್ ಗ್ರಾಹಕರ ಅಚ್ಚುಮೆಚ್ಚಾಗಿತ್ತು. ಬೆಂಕಿಯ ಕೆನ್ನಾಲಿಗೆ ಎಲ್ಲಾ ವಸ್ತುಗಳನ್ನು ಆಹುತಿ ಪಡೆದಿದೆ.

ಒಂದು ದ್ವಿಚಕ್ರ ವಾಹನ ಸೇರಿದಂತೆ ಫ್ರಿಡ್ಜ್ ಗಳು, ಟೇಬಲ್, ಕುರ್ಚಿಗಳು ಸಾಕಷ್ಟು ವಸ್ತುಗಳು ಕರಕಲಾಗಿದೆ. ಅಂದಾಜು 6 ಲಕ್ಷ ರೂಗಳ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ. ಗುಬ್ಬಿ ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವರದಿ: ರಾಘವೇಂದ್ರ ಗುಬ್ಬಿ.

Related Articles

Leave a Reply

Your email address will not be published.

Back to top button
protected