ತುಮಕೂರುಸತ್ಯ ವಿಸ್ಮಯ ಪತ್ರಿಕೆ

65 ಕೆವಿ ಸಾಮರ್ಥ್ಯದ ವಿದ್ಯುತ್ ತಂತಿ ಬಿದ್ದು ಎರಡು ಹಸುಗಳು ಸಾವು : ಬೆಸ್ಕಾಂ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ.

ಗುಬ್ಬಿ: 65 ಕೆವಿ ಸಾಮರ್ಥ್ಯದ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಎರಡು ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಕೊಂಚದರಲ್ಲೇ ಹಸುಗಳ ಮಾಲೀಕ ಶಿವಣ್ಣ ಪಾರಾದ ಘಟನೆ ಪಟ್ಟಣದ ಗಟ್ಟಿ ಲೇಔಟ್ ಬಡಾವಣೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ.ಈಗಾಗಲೇ ಹಳೆಯದಾದ ತಂತಿ ಬದಲಾವಣೆಗೆ ನಿವಾಸಿಗಳು ಅರ್ಜಿ ಸಲ್ಲಿಸಿದ್ದರೂ ಬೆಸ್ಕಾಂ ನಿರ್ಲಕ್ಷ್ಯಕ್ಕೆ ಇಂದು ಎರಡು ಮೂಕ ಪ್ರಾಣಿಗಳು ಬಲಿಯಾಗಿವೆ. ರೈತ ಶಿವಣ್ಣ ಅವರ ಈ ಎರಡು ಹಸುಗಳು ಜೀವನೋಪಾಯಕ್ಕೆ ಆಧಾರವಾಗಿತ್ತು. ಸುಮಾರು ಎರಡು ಲಕ್ಷ ರೂಗಳ ಈ ಎಚ್ಎಫ್ ತಳಿಯ ರಾಸುಗಳು ಬಲಿಗೆ ಬೆಸ್ಕಾಂ ಹೊಣೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆಯಲ್ಲಿ ಬರುತ್ತಿದ್ದ ಶಿವಣ್ಣ ಮತ್ತು ಎರಡು ಹಸುಗಳು ಮೇಲೆಯೇ ಹರಿದು ಬಿದ್ದ ವಿದ್ಯುತ್ ತಂತಿ ಕ್ಷಣಾರ್ಧದಲ್ಲಿ ವಿದ್ಯುತ್ ಪಸರಿಸಿ ಎರಡು ಹಸುಗಳು ಸ್ಥಳದಲ್ಲೇ ಮೃತ ಪಟ್ಟಿವೆ. ಅದೃಷ್ಟವಶಾತ್ ಶಿವಣ್ಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಲಿಗಾಗಿ ಕಾದುಕುಳಿತ ಈ ವಿದ್ಯುತ್ ತಂತಿ ಬದಲಿಸಲು ಮೀನಾಮೇಷ ಎಣಿಸಿದ ಬೆಸ್ಕಾಂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.ಸ್ಥಳಕ್ಕೆ ಕಂದಾಯಾಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ವರದಿ: ರಾಘವೇಂದ್ರ ಗುಬ್ಬಿ

Related Articles

Leave a Reply

Your email address will not be published.

Back to top button
protected