ಹೇರೂರು ಗ್ರಾಪಂ ಉಪಾಧ್ಯಕ್ಷ ಸ್ಥಾನಕ್ಕೆ ಗಂಗಮ್ಮ ರಾಜೀನಾಮೆ.

ಗುಬ್ಬಿ: ತಾಲ್ಲೂಕಿನ ಕಸಬ ಹೋಬಳಿ ಹೇರೂರು ಗ್ರಾಪಂ ಉಪಾಧ್ಯಕ್ಷ ಸ್ಥಾನಕ್ಕೆ ಕಿಟ್ಟದಕುಪ್ಪೆ ಕ್ಷೇತ್ರದ ಗಂಗಮ್ಮ ಶುಕ್ರವಾರ ರಾಜೀನಾಮೆ ಸಲ್ಲಿಸಿದರು.ಪಂಚಾಯಿತಿ ಕಚೇರಿಯಲ್ಲಿ ಮದ್ಯಾಹ್ನ ಅಧ್ಯಕ್ಷ ಸೋಮಶೇಖರ್ ಅವರನ್ನು ಭೇಟಿ ಮಾಡಿ ಚರ್ಚಿಸಿ ಸ್ವಇಜ್ಜೆಯಿಂದ ರಾಜೀನಾಮೆ ಲಿಖಿತ ರೂಪದಲ್ಲಿ ಅಧ್ಯಕ್ಷರಿಗೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಕಳೆದ 15 ತಿಂಗಳಿಂದ ಜನಸೇವೆ ಮಾಡಿದ್ದು ಕೆಲ ವೈಯುಕ್ತಿಕ ಕಾರಣದಿಂದ ಸ್ವ ಇಜ್ಜೆಯಿಂದ ಎಸ್ಸಿ ಮಹಿಳಾ ಮೀಸಲಿನ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾಗಿ ತಿಳಿಸಿದರು.ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಜಿ.ಸಿ.ನರಸಿಂಹಮೂರ್ತಿ ಮಾತನಾಡಿ ಅಧಿಕಾರ ವಿಕೇಂದ್ರೀಕರಣ ನಂತರದಲ್ಲಿ ತಳ ಸಮುದಾಯಗಳು ಅಧಿಕಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಸಮಾಜವನ್ನು ಅಭಿವೃದ್ಧಿಯತ್ತ ನಡೆಸಿದ್ದಾರೆ. ಈ ಹೇರೂರು ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿ ಮಹಿಳಾ ಮೀಸಲಿನ ಸ್ಥಾನವನ್ನು ಗಂಗಮ್ಮ ನಡೆಸಿ ಸೈ ಎನಿಸಿಕೊಂಡಿದ್ದಾರೆ. ಹೇರೂರು ಮಾದರಿ ಪಂಚಾಯಿತಿ ಎನಿಸಲು ಸಹಕರಿಸಿದ್ದಾರೆ ಎಂದರು.ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಶ್ರೀನಿವಾಸ್, ಬಸವರಾಜಮ್ಮ,, ಮುಖಂಡರಾದ ಎನ್.ಎ. ನಾಗರಾಜು, ಶ್ರೀನಿವಾಸ್, ಗೌಸ್ ಖಾನ್, ಪುಟ್ಟಸ್ವಾಮಣ್ಣ, ಸಂತೋಷ್ ಇತರರು ಇದ್ದರು.
ವರದಿ: ರಾಘವೇಂದ್ರ ಗುಬ್ಬಿ