ತುಮಕೂರುಸತ್ಯ ವಿಸ್ಮಯ ಪತ್ರಿಕೆ

ಕರ್ನಾಟಕ ರಕ್ಷಣಾ ವೇದಿಕೆ ತುಮಕೂರು ಜಿಲ್ಲಾ ಕಾರ್ಮಿಕ ಘಟಕ ಕಾರ್ಮಿಕ ರತ್ನ ರುರಲ್ ಡೆವಲಪ್ಮೆಂಟ್ ಫೌಂಡೇಶನ್ ಇವರ ವತಿಯಿಂದ ಉಚಿತ ಕೌಶಲ್ಯ ತರಬೇತಿ ಶಿಬಿರಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ

ತಿಪಟೂರು.ಕರ್ನಾಟಕ ರಕ್ಷಣಾ ವೇದಿಕೆ ತುಮಕೂರು ಜಿಲ್ಲಾ ಕಾರ್ಮಿಕ ಘಟಕ ಕಾರ್ಮಿಕ ರತ್ನ ರುರಲ್ ಡೆವಲಪ್ಮೆಂಟ್ ಫೌಂಡೇಶನ್ ಇವರ ವತಿಯಿಂದ ಉಚಿತ ಕೌಶಲ್ಯ ತರಬೇತಿ ಶಿಬಿರಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕರಾದ ದಿನೇಶ್ ಅವರು. ಉದ್ಯೋಗಂ ಪುರುಷ ಲಕ್ಷಣಂ ಅನ್ನುವುದು ವಾಡಿಕೆಯಾಗಿತ್ತು ಈಗಿನ ದಿನಮಾನಗಳಲ್ಲಿ ಮಹಿಳೆಯರು ಸಹ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಅಸ್ತಿತ್ವವನ್ನು ತೋರಿಸಿದ್ದಾರೆ. ಹಾಗೆ ಇಂತಹ ಸಂಘಟನೆಗಳು ಎನ್ಜಿಒಗಳು ಮಹಿಳೆಯರಿಗೆ ಇಂತಹ ಕೌಶಲ್ಯ ತರಬೇತಿಗಳನ್ನು ಮಾಡುವುದರ ಮೂಲಕ ಮನೆಯಲ್ಲಿ ಕುಳಿತು ದುಡಿಮೆ ಮಾಡಿ ಕುಟುಂಬ ಪೋಷಣೆ ಮಾಡಲು ನೆರವಾಗುತ್ತಿದೆ. ಎಂದರು ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಿಗುವಂತಹ ಸೌಲಭ್ಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಿರಿಯ ಮೇಲ್ವಿಚಾರಕರಾದ ಮೀನಾಕ್ಷಮ್ಮ ನವರು ಕುಟುಂಬದ ಸಮಸ್ಯೆಗಳನ್ನು ಸ್ವಲ್ಪ ಬದಿಗಿಟ್ಟು ಇಂತಹ ತರಬೇತಿಗಳ ಸಂಪೂರ್ಣ ವಾಗಿ ಉಪಯೋಗಿಸಿಕೊಂಡು ಆರ್ಥಿಕವಾಗಿ ಮಹಿಳೆಯರು ಸದೃಢವಾಗಬೇಕು ಹಾಗೂ ಶ್ರದ್ಧೆಯಿಂದ ಕಲಿಯುವಂತೆ ಶಿಬಿರಾರ್ಥಿಗಳಿಗೆ ಸೂಚಿಸಿದರು.

ಹಾಗೂ ಇಲಾಖೆಯಿಂದ ಮಹಿಳೆಯರಿಗೆ ಸಿಗುವ ಸರ್ಕಾರಿ ಸೌಲಭ್ಯಗಳ ಮಾಹಿತಿಯನ್ನು ನೀಡಿದರು ಹಾಗೂ ಕರವೇ ಕಾರ್ಮಿಕರ ಘಟಕದ ಜಿಲ್ಲಾಧ್ಯಕ್ಷರು ಕಾರ್ಯಕ್ರಮದ ಆಯೋಜಕರಾದ ಶಶಿಧರ್ ಅಯ್ಯನ ಬಾವಿ ಅವರು. ಮಾತನಾಡಿ. ಕರವೇ ಹಾಗೂ ಕಾರ್ಮಿಕ ರತ್ನ ರುರಲ್ ಡೆವಲಪ್ಮೆಂಟ್ ಫೌಂಡೇಶನ್ ಪ್ರತಿವರ್ಷ ಮಹಿಳೆಯರಿಗಾಗಿ ಇಂತಹ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳುತ್ತೇವೆ ಜಿಲ್ಲಾದ್ಯಂತ ಸುಮಾರು ಕಾರ್ಯಕ್ರಮಗಳನ್ನು ಮಾಡಿ ಯಶಸ್ವಿ ಕೂಡ ಆಗಿದ್ದೇವೆ ತಿಪಟೂರಿನಲ್ಲಿ ಇದು ನಾಲ್ಕನೇ ಬಾರಿ ಶಿಬಿರ ನಡೆಸುತ್ತಿದ್ದು ಮಹಿಳೆಯರು ವಿದ್ಯಾರ್ಥಿನಿಯರು ನಮ್ಮ ಸ್ವಲ್ಪ ಸಮಯವನ್ನು ಮೀಸಲಿಟ್ಟು ಇಂತಹ ಕೈಕಸುಬು ಗಳನ್ನು ಕಲಿತು ಕುಟುಂಬದ ಆರ್ಥಿಕ ಹೊರೆಯನ್ನು ಕಡಿಮೆಗೊಳಿಸಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು ಕಾರ್ಯಕ್ರಮದಲ್ಲಿ ತರಬೇತುದಾರರಾದ ಅನುಷಾ. ಫಾತಿಮಾ ಇಮ್ರಾನ್ ಟ್ರಸ್ಟ್ ನ ಅಧ್ಯಕ್ಷರ ಚೈತ್ರ. 150ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು

ವರದಿ: ಸ್ವಾಮಿ ತಿಮ್ಮಲಾಪುರ

Related Articles

Leave a Reply

Your email address will not be published.

Back to top button
protected