ತುಮಕೂರುಸತ್ಯ ವಿಸ್ಮಯ ಪತ್ರಿಕೆ

ನಾಳೆ ಇಂದ ಗುರುವಂದನೆ ಕಾರ್ಯಕ್ರಮ

ವೈ.ಎನ್.ಹೊಸಕೋಟೆ : ಗ್ರಾಮದ ರಾಷ್ಟ್ರೀಯ ವಿದ್ಯಾಪೀಠ ಪ್ರೌಢಶಾಲೆಯ 1988-89 ನೇ ಸಾಲಿನ ಎಸ್. ಎಸ್. ಎಲ್. ಸಿ ವಿದ್ಯಾರ್ಥಿ ಬಳಗವು ಪ್ರೌಢಶಾಲೆಯಲ್ಲಿ ದಿನಾಂಕ 14 ಮೇ ಮತ್ತು 15 ರ ಎರಡು ದಿನಗಳ ಕಾಲ ಗುರುವಂದನೆ ಮತ್ತು ಸ್ನೇಹ ಮಿಲನ ಕಾರ್ಯಕ್ರಮವನ್ನು ಆಯೋಸಿದೆ. ಮೇ 14 ರ ಶನಿವಾರದಂದು ಕ್ರೀಡೋತ್ಸವ, ಉದ್ಘಾಟನೆ, ಶಿಕ್ಷಕರು, ಶಾಲೆ ಮತ್ತು ಗ್ರಾಮದ ಮಾಹಿತಿಯ ಕೃತಿ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮೇ 15 ರ ಭಾನುವಾರ ಗುರುಗಳ ಪುರಮೆರವಣಿಗೆ, ಗುರುವಂದನೆ, ದೈವಾದೀನರಾದ ಗುರುಗಳ ಕುಟುಂಬಗಳಿಗೆ ಗೌರವ ಸಮರ್ಪಣೆ, ಪ್ರತಿಭಾ ಪುರಸ್ಕಾರ ಮತ್ತು ಸಸಿ ವಿತರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ 1988-89 ನೇ ಸಾಲಿನ ಎಲ್ಲಾ ಹಳೆಯ ವಿದ್ಯಾರ್ಥಿಗಳು ಸಕಾಲದಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿ ಮಾಡಬೇಕೆಂದು ಎಂದು ವಿದ್ಯಾರ್ಥಿ ಬಳಗ ಕೋರಿದೆ.

ವರದಿ:ಸತೀಶ್ ವೈ.ಎನ್.ಹೊಸಕೋಟೆ

Related Articles

Leave a Reply

Your email address will not be published.

Back to top button
protected