ಬೆಂಗಳೂರುಸತ್ಯ ವಿಸ್ಮಯ ಪತ್ರಿಕೆ

ಜೆ ಪಿ ನಗರದಲ್ಲಿ ಏರಿಯರ್ ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಉದ್ಘಾಟಿಸಿದ ನಟ ಪ್ರವೀಣ್ ತೇಜ್

ಬೆಂಗಳೂರಿನಲ್ಲಿ ೨೦ಕ್ಕೂ ಹೆಚ್ಚು ಶೋ ರೂಮ್ ಹೊಂದಿರುವ ಏರಿಯರ್ ಎಲೆಕ್ಟ್ರಿಕಲ್ ಸ್ಕೂಟರ್ ಕಂಪನಿ ನೂತನವಾಗಿ ಜೆ ಪಿ ನಗರದಲ್ಲಿ ಹೊಸ ಶೋ ರೂಮ್ ಅನ್ನು ಆರಂಭಿಸಿದೆ. ಗ್ರಾಹಕರ ಬೇಡಿಕೆ ಜಾಸ್ತಿಯಾಗುತ್ತಿರುವ ಕಾರಣ ಏರಿಯರ್ ಮುಖ್ಯಸ್ಥರು ಜನರಿಗೆ ಅನುಕೂಲವಾಗಲು ಬೆಂಗಳೂರಿನ ಎಲ್ಲ ಪ್ರಸಿದ್ಧ ಏರಿಯಾಗಳಲ್ಲಿ ತನ್ನ ಎಲೆಕ್ಟ್ರಿಕ್ ಶಾಖೆ ಗಳನ್ನ ತೆರೆಯಲು ಸಜ್ಜಾಗಿದೆ ….

ಇಂದಿನ ದುಬಾರಿ ಪೆಟ್ರೋಲ್ ಬೆಲೆಯಿಂದ ತತ್ತರಿಸುತ್ತಿರುವ ಜನರಿಗಾಗಿ ಪರಿಸರ ಸ್ನೇಹಿಯಾದ ಮತ್ತು ಸಾಮಾನ್ಯ ಜನರಿಗೂ ಕೈಗೆಟುಕುವ ಅತ್ಯಂತ ಕಡಿಮೆ ವೆಚ್ಚ ದ ಸುಸರ್ಜಿತ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನ ತಯಾರಿಸುತ್ತಿರುವ ಏರಿಯರ್ ಕಂಪನಿ. ಈಗಾಗಲೇ ಬೆಂಗಳೂರು ಮತ್ತು ಕರ್ನಾಟಕದ ಇನ್ನಿತರ ಜಿಲ್ಲೆಗಳಲ್ಲಿ ಹಲವಾರು ಶಾಖೆ ಗಳನ್ನ ಹೊಂದಿದ್ದು, ಚಾರ್ಜಿಂಗ್,ಸರ್ವಿಸ್ ವ್ಯವಸ್ಥೆ ಯನ್ನು ಕರ್ನಾಟಕದ ಮೂಲೆ ಮೂಲೆಗೂ ಕಲ್ಪಿಸಲಾಗಿದೆ.ಜೆಪಿ ನಗರದಲ್ಲಿ ಹೊಸ ಏರಿಯರ್ ಶೋರೂಮ್ ಅನ್ನು ನಟ ಪ್ರವೀಣ್ ತೇಜ್ ಉದ್ಘಾಟಿಸಿದ್ದು ಅವರಿಗೆ ಏರಿಯರ್ ಕಂಪನಿಯ ಮುಖ್ಯಸ್ಥರಾದ ರವಿ ಪ್ರಕಾಶ್ ಭಟ್ ,ಸಂತೋಷ್ , ಹರ್ಷಿತ್ ಶೆಟ್ಟಿ ಹಾಗೂ ಪ್ರವೀಣ್ ಸಾಥ್ ನೀಡಿದ್ರು ..

ವರದಿ: ನವೀನ್ ಕಿಲಾರ್ಲಹಳ್ಳಿ

Related Articles

Leave a Reply

Your email address will not be published.

Back to top button
protected