ಜೆಪಿ ನಗರದಲ್ಲಿ ಏರಿಯರ್ ಎಲೆಕ್ಟ್ರಿಕ್ ಬೈಕ್ ನ 7 ನೇ ಶಾಖೆ ಉದ್ಘಾಟನೆ

ಜೆಪಿ ನಗರ:ಏರಿಯರ್ ಕಂಪನಿಯ ಎಲೆಕ್ಟ್ರಿಕಲ್ ಬೈಕ್ ಶೋ ರೂಮ್ ನೂತನ ಶಾಖೆ ಇದೀಗ ನಿಮ್ಮ ಜಯನಗರದಲ್ಲಿ ತಲೆ ಎತ್ತಿದೆ.ಇಂದಿನ ದುಬಾರಿ ಪೆಟ್ರೋಲ್ ಬೆಲೆಯಿಂದ ತತ್ತರಿಸುತ್ತಿರುವ ಜನರಿಗಾಗಿ ಪರಿಸರ ಸ್ನೇಹಿಯಾದ ಮತ್ತು ಸಾಮಾನ್ಯ ಜನರಿಗೂ ಕೈಗೆಟುಕುವ ಅತ್ಯಂತ ಕಡಿಮೆ ವೆಚ್ಚ ದ ಸುಸರ್ಜಿತ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನತಯಾರಿಸುತ್ತಿರುವ ಏರಿಯರ್ ಕಂಪನಿ.

ಈಗಾಗಲೇ ಬೆಂಗಳೂರು ಮತ್ತು ಕರ್ನಾಟಕದ ಇನ್ನಿತರ ಜಿಲ್ಲೆಗಳಲ್ಲಿ ಹಲವಾರು ಶೋ ರೂಮ್ ಗಳನ್ನು ಹೊಂದಿದ್ದೆ ಚಾರ್ಜಿಂಗ್,ಸರ್ವಿಸ್ ವ್ಯವಸ್ಥೆ ಯನ್ನು ಕರ್ನಾಟಕದ ಮೂಲೆ ಮೂಲೆಗೂ ಕಲ್ಪಿಸಲಾಗಿದೆ. ದೇಶದಲ್ಲಿಯೇ ಅತೀ ಹೆಚ್ಚು ಮಾರಾಟವಾದ ಎಲೆಕ್ಟ್ರಿಕಲ್ ವಾಹನ ಎನ್ನುವ ಹೆಗ್ಗಳಿಕೆಗೆಯನ್ನು ಕೂಡ ಏರಿಯರ್ ಹೊಂದಿದೆ.

ದೇಶದಲ್ಲಿ ಇಂದು ತೈಲ ಪೂರೈಕೆ ಅತ್ಯಂತ ದೊಡ್ಡ ಸಮಸ್ಯೆ ಎಂದೇ ಹೇಳಬಹುದಾಗಿದೆ. ಹೀಗಾಗಿ ಭವಿಷ್ಯದ ವಾಹನ ಎಂದೇ ಎಲೆಕ್ಟ್ರಿಕಲ್ ವಾಹನ ವನ್ನ ಕರೆಯಲಾಗುತ್ತಿದ್ದು ಕರ್ನಾಟಕದಲ್ಲೇ ತಯಾರಿಸುವ ಏರಿಯರ್ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನ ಹೊಸ ಕ್ರಾಂತಿ ಯನ್ನೇ ಸೃಷ್ಠಿಸಿ ಗ್ರಾಹಕರ ವಿಶ್ವಾಸವನ್ನ ಗಳಿಸಿದೆ.

ಈಗಾಗಲೇ ಬೆಂಗಳೂರಿನಲ್ಲಿ 20ಕ್ಕೂ ಹೆಚ್ಚು ಶೋ ರೂಮ್ ಹೊಂದಿರುವ ಏರಿಯರ್ ಎಲೆಕ್ಟ್ರಿಕಲ್ ಸ್ಕೂಟರ್ ಕಂಪನಿ ನೂತನ ವಾಗಿ ಜಯನಗರ 9 ನೇ ಬ್ಲಾಕ್ ನಲ್ಲಿ ಹೊಸ ಶೋ ರೂಮ್ ಅನ್ನು ಆರಂಭಿಸಿದೆ. ಏರಿಯರ್ ಕಂಪನಿಯ ಎಲ್ಲಾ ಬಗೆಯ ವಾಹನಗಳು, ಸರ್ವಿಸ್ ಸೌಲಭ್ಯಗಳು ಕೂಡ ಇಲ್ಲಿ ಲಭ್ಯವಿದೆ.
ವರದಿ: ನವೀನ್ ಕಿಲಾರ್ಲಹಳ್ಳಿ